ಮಹಾ ನಗರ ಪಾಲಿಕೆಯಲ್ಲಿ ನಡೆದ ಸಿಟಿಸ್ 2.0 ಯೋಜನೆ ಅನುಷ್ಠಾನದ ಸಭೆಯಲ್ಲಿ ಪ್ರೀತಿ ಕಾಮಕರ, ಹಣಮಂತ ಕೊಂಗಾಲಿ, ಆಯುಕ್ತ ಕಾರ್ತಿಕ ಎಂ.ಇತರರಿದ್ದರು.
ಬೆಳಗಾವಿ: ಇಲ್ಲಿನ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಬುಧವಾರ ಸ್ಮಾರ್ಟ್ ಸಿಟಿ-2 ಯೋಜನೆ ಅನುಷ್ಠಾನ ಕುರಿತು ಮೇಯರ್ ಪ್ರೀತಿ ಕಾಮಕರ್, ಉಪಮೇಯರ್ ಹನಮಂತ ಕೊಂಗಾಲಿ ಅಧ್ಯಕ್ಷತೆಯಲ್ಲಿ ಸಭೆ ಜರುಗಿತು.
ಘನ ತ್ಯಾಜ್ಯ ಸಂಸ್ಕರಣ ಘಟಕ ಸೇರಿದಂತೆ ಕ್ರಿಯಾಯೋಜನೆಗೊಳಪಡುವ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿ, ಇ ತ್ಯಾಜ್ಯ ಸಂಗ್ರಹಣ ಘಟಕ, ಯಂತ್ರಗಳು, ವಾಹನಗಳು ಹಾಗೂ ಮಾನವ ಸಂಪನ್ಮೂಲದ ಅಗತ್ಯತೆ ಸೇರಿದಂತೆ ಮುಂತಾದ ಸಂಪನ್ಮೂಲಗಳ ಕುರಿತು ಚರ್ಚಿಸಲಾಯಿತು.
ಪಾಲಿಕೆ ಆಯುಕ್ತ ಕಾರ್ತಿಕ ಎಂ., ಆಡಳಿತ ಪಕ್ಷದ ನಾಯಕ ಸಂತೋಷ ಪೇಡ್ನೇಕರ, ಸ್ಥಾಯಿ ಸಮಿತಿ ಅಧ್ಯಕ್ಷೆ ಲಕ್ಷ್ಮೀ ರಾಥೋಡ, ನಗರಸೇವಕ ರವಿ ಧೋತ್ರೆ, ತಾಂತ್ರಿಕ ವಿಭಾಗದ ಜಿ.ಎಂ. ವೀರೇಂದ್ರ ಹಿರೇಮಠ, ಪಾಲಿಕೆ ಪರಿಷತ ಕಾರ್ಯದರ್ಶಿ ಲಕ್ಷ್ಮೀ ನಿಪ್ಪಾಣಿಕರ್, ಅಭಿಯಂತರರಾದ ಪ್ರವೀಣ ಕಿಲಾರಿ, ಸಲ್ಮಾನ ಸಿಂದಗೀಕರ, ಸ್ಮಾರ್ಟ್ ಸಿಟಿ ಎಂಡಿ ಕವಿತಾ ವಾರಂಗಲ ಇತರರಿದ್ದರು.