ಮೂಡಲಗಿ ಹನುಮನ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಅಂಬಿಗರ ಚೌಡಯ್ಯನವರ ಪ್ರವಚನ ಹಾಗೂ ಮಹಾಪೂಜಾ ಕಾರ್ಯಕ್ರಮದಲ್ಲಿ ಬಸವರಾಜ ಸ್ವಾಮೀಜಿ ಮಾತನಾಡಿದರು. ನಿಂಗಪ್ಪ ಕುರಬೆಟ್, ಮಹಾದೇವ ಶೆಕ್ಕಿ, ಬಸಪ್ಪ ಹಾಲೋಳಿ ಇತರರಿದ್ದರು.
ಮೂಡಲಗಿ: ನಿಜಶರಣ ಅಂಬಿಗರ ಚೌಡಯ್ಯನವರ ಆದರ್ಶ ಅಳವಡಿಸಿಕೊಂಡು ಸಮಾಜದವರು ಮಕ್ಕಳಿಗೆ ಉತ್ತಮ ಶಿಕ್ಷಣದ ಜತೆಗೆ, ಒಳ್ಳೆಯ ಸಂಸ್ಕಾರ ನೀಡಬೇಕು ಎಂದು ಕಪರಟ್ಟಿ-ಕಳ್ಳಿಗುದ್ದಿ ಮಠದ ಬಸವರಾಜ ಸ್ವಾಮೀಜಿ ಹೇಳಿದರು.
ಹನುಮಾನ ದೇವಸ್ಥಾನದಲ್ಲಿ ಕಪರಟ್ಟಿ-ಕಳ್ಳಿಗುದ್ದಿ ಸದಾಶಿವ ಮಹಾದೇವಾಶ್ರಮ, ಭೀಮವ್ವ ಲಕ್ಷ್ಮಣರಾವ ಜಾರಕಿಹೊಳಿ ಮೆಮೋರಿಯಲ್ ಚಾರಿಟಬಲ್ ಟ್ರಸ್ಟ್ ಹಾಗೂ ನಿಜಶರಣ ಅಂಬಿಗರ ಚೌಡಯ್ಯನವರ ಧರ್ಮ ಜಾಗತಿ ಬಳಗದ ಆಶ್ರಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ನಿಜಶರಣ ಅಂಬಿಗರ ಚೌಡಯ್ಯನವರ ಪ್ರವಚನ ಹಾಗೂ ಮಹಾಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಮಾಜಿಕ ಕ್ರಾಂತಿ ಮಾಡುವ ಮೂಲಕ ಅನೇಕ ಶಿವಶರಣರು ಸಮಾನತೆಗಾಗಿ ಶ್ರಮಿಸಿದ್ದಾರೆ. ಕಾಯಕ ನಿಷ್ಠೆ ಮತ್ತು ಪ್ರಾಮಾಣಿಕತನದಿಂದ ಜೀವನ ಸಾಗಿಸಿದ ಅಂಬಿಗರ ಚೌಡಯ್ಯ 12ನೇ ಶತಮಾನದ ಶ್ರೇಷ್ಠ ಶರಣರಾಗಿದ್ದರು ಎಂದರು. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ನಿಂಗಪ್ಪ ಕುರಬೆಟ್, ಬಿಜೆಪಿ ಅರಭಾವಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ, ಬಸಪ್ಪ ಹಾಲೋಳಿ, ಕಷ್ಣಾ ನಾಶಿ, ರವಿ ನೇಸೂರ