ಬಾಡಗಿ ಸರ್ಕಾರಿ ಪ್ರಾಥಮಿಕ ಶಾಲೆ ನೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸರಸ್ವತಿ ದೇವಿಗೆ ಪೂಜೆ ಸಲ್ಲಿಸಲಾಯಿತು. ರಾಮಣ್ಣ ಹುನ್ನೂರ, ಆರತಿ ಕಾಂಬಳೆ, ಸುರೇಶ ಹುನ್ನೂರ ಇತರರಿದ್ದರು. 
ಬೆಳಗಾವಿ

ಸರ್ಕಾರಿ ಶಾಲೆಗೆ ನೂರರ ಸಡಗರ

ಅರಟಾಳ: ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಜತೆಗೆ ಸಂಸ್ಕಾರ ನೀಡಲಾಗುತ್ತಿದೆ ಎಂದು ಹಿರಿಯರಾದ ರಾಮಣ್ಣ ಹುನ್ನೂರ ಹೇಳಿದರು.
ಸಮೀಪದ ಬಾಡಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ನೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಂಭ್ರಮಾಚರಣೆಯಲ್ಲಿ ಮಾತನಾಡಿ, ಶಾಲೆಯಲ್ಲಿ ಕಲಿತವರು ಇಂದು ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಫೆ.೨೬, ೨೭ರಂದು ಹಿರಿಯ ವಿದ್ಯಾರ್ಥಿಗಳಿಂದ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. 
ಎಸ್‌ಡಿಎಂಸಿ ಅಧ್ಯಕ್ಷ ಸಂಗನಗೌಡ ಪಾಟೀಲ, ಉಪಾಧ್ಯಕ್ಷ ಆರತಿ ಕಾಂಬಳೆ, ಸುರೇಶ ಹುನ್ನೂರ, ಮುಖ್ಯಶಿಕ್ಷಕ ಎಸ್.ಟಿ.ಬೆಳ್ಳಂಕಿ, ಬಿ.ಕೆ.ಮುಧೋಳ, ಎಸ್.ಎಂ.ಮಮದಾಪುರ, ರಮೇಶ ಹುನ್ನೂರ, ರಾವಸಾಹೇಬ ಬಿರಾದಾರ, ರಾಜು ಬಿರಾದಾರ, ಸಿದ್ದು ಬಿರಾದಾರ,  ಸದಾಶಿವ ಸನದಿ, ಬಸಪ್ಪ ಮಿರ್ಜಿ, ಹನುಮಂತ ಪಡಸಲಗಿ, ಶಿವಾನಂದ ಗಾಂಜಿ, ಭೀಮಪ್ಪ ಅಂಬಿಗೇರ, ಹನುಮಂತ ನಾಗಠಾಣ, ಅಪ್ಪಾಸಾಹೇಬ ನೇಮಗೌಡ, ಮುತ್ತು ಬಿಳ್ಳೂರ ಇತರರಿದ್ದರು.