ಗುರ್ಲಾಪುರ ಬಸವಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಕಾನೂನು ಸಾಕ್ಷರತಾ ಕಾರ್ಯಕ್ರಮವನ್ನು ಸವಿತಾ ಮುಕ್ಕಲ ಉದ್ಘಾಟಿಸಿದರು. ಲೀಲಾವತಿ, ಅನಿಲ ಕೌಜಲಗಿ, ರೇವಪ್ಪ ನೇಮಗೌಡರ, ದುಂಡಪ್ಪ ಮುಗಳಖೋಡ ಇತರರಿದ್ದರು 
ಬೆಳಗಾವಿ

ಮಾನವ ಕಳ್ಳ ಸಾಗಣೆ ಶಿಕ್ಷಾರ್ಹ ಅಪರಾಧ.

ಅರ್ಚನಾ ಜಾಧವ
ಗುರ್ಲಾಪುರ: ಮಾನವ ಕಳ್ಳ ಸಾಗಣೆ ಅಪರಾಧವಾಗಿದ್ದು, ಆಮಿಷಕ್ಕೆ ಒಳಗಾಗಿ ಅಂಥ ಕೃತ್ಯಕ್ಕೆ ಬಲಿಯಾಗಬಾರದು ಎಂದು ನ್ಯಾಯಾಧೀಶೆ ಸವಿತಾ ಮುಕ್ಕಲ ಹೇಳಿದರು.
ಬಸವಕಲ್ಯಾಣ ಮಂಟಪದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲ ಸಂಘ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಶ್ರಯದಲ್ಲಿ ಮಾನವ ಕಳ್ಳ ಸಾಗಣೆ ವಿರೋಧಿ ದಿನ ಆಚರಣೆ ಅಂಗವಾಗಿ ಈಚೆಗೆ ಹಮ್ಮಿಕೊಂಡಿದ್ದ ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಆಸ್ತಿ ಹಂಚಿಕೆ ಇತ್ಯಾದಿ ಸಂದರ್ಭದಲ್ಲಿ ಕಾನೂನು ಬಗ್ಗೆ ತಿಳಿವಳಿಕೆ ಬೇಕಾದರೆ ತಾಲೂಕು ಕೇಂದ್ರದಲ್ಲಿ ಕಾನೂನು ಸೇವೆಗಳ ಸಮಿತಿಯಿದ್ದು, ಮಾರ್ಗದರ್ಶನ ಪಡೆದುಕೊಳ್ಳಬೇಕು ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಥಣಿ ತಾಲೂಕಿನ ನಿರ್ದೇಶಕಿ ಲೀಲಾವತಿ, ಸಂಪನ್ಮೂಲ ವ್ಯಕ್ತಿಗಳಾದ ಅನಿಲ ಕೌಜಲಗಿ ಮಾತನಾಡಿದರು.

ಪ್ರಕಾಶ ಮುಗಳಖೋಡ, ವಕೀಲರ ಸಂಘದ ಅಧ್ಯಕ್ಷ ಆರ್.ಆರ್.ಭಾಗೋಜಿ, ಉದಯ ಗೌಡ ಇತರರು ಇದ್ದರು. ಹರೀಶ ಕುಮಾರ ಬಿ.ಬಿ.ಸ್ವಾಗತಿಸಿದರು, ವಿಜಯಲಕ್ಷ್ಮೀ ನಿರೂಪಿಸಿದರು.