ಹುಕ್ಕೇರಿ ಹಿರೇಮಠದಲ್ಲಿ ಮೈಸೂರು ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರನ್ನು ಚಂದ್ರಶೇಖರ ಶಿವಾಚಾರ್ಯರು ಸನ್ಮಾನಿಸಿದರು. ಮಹಾವೀರ ನಿಲಜಗಿ, ಪೃಥ್ವಿ ಕತ್ತಿ, ಸುನೀಲ ಪರ್ವತರಾವ ಇತರರಿದ್ದರು. 
ಬೆಳಗಾವಿ

ಸಾಮರಸ್ಯಕ್ಕೆ ಹೆಸರಾದ ಹುಕ್ಕೇರಿ

ವಿದ್ಯಾ ಶೆಟ್ಟನಗೌಡ್ರ

ಪ್ರಮುಖ ಮುಖ್ಯಾಂಶಗಳು

  • ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ ಹೇಳಿಕೆ
  • ಹುಕ್ಕೇರೀಶ ಉತ್ಸವ
  • ವಿಶ್ವಕ್ಕೆ ಮೈಸೂರು ದಸರಾ ಚಿರಪರಿಚಿತ
ಹುಕ್ಕೇರಿ: ಮೈಸೂರು ಅರಮನೆಗೂ ಹುಕ್ಕೇರಿ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠಕ್ಕೂ ಅವಿನಾಭವ ಸಂಬಂಧವಿದೆ. ಮೈಸೂರಿನ ಸಂಸ್ಕೃತಿಯನ್ನು ಉತ್ತರ ಕರ್ನಾಟಕಕ್ಕೆ ಪರಿಚಯಿಸಿದ ಕೀರ್ತಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗೆ ಸಲ್ಲುತ್ತದೆ ಎಂದು ಮೈಸೂರು 
ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರು ಹೇಳಿದರು.
ಪಟ್ಟಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹುಕ್ಕೇರೀಶರ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಮೈಸೂರು ದಸರಾ ವಿಶ್ವಕ್ಕೆ ಹೆಸರುವಾಸಿಯಾಗಿದೆ. ಹುಕ್ಕೇರಿ ಹಿರೇಮಠದ ದಸರಾ ಸಾಮರಸ್ಯ ಮತ್ತು ಭಾವೈಕ್ಯಕ್ಕೆ ಹೆಸರಾಗಿರುವುದು ಅಭಿಮಾನದ ಸಂಗತಿ. ಹುಕ್ಕೇರಿಯ ವೇದ, ಸಂಸ್ಕೃತಿ, ಕನ್ನಡ ಅಭಿಮಾನ ಮತ್ತು ದಾಸೋಹ ಕಾರ್ಯ ಮಾಡುವ ಮೂಲಕ ಎಲ್ಲರ ಮನ ಗೆದ್ದಿದೆ ಎಂದರು.
ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಂಸದ ರಮೇಶ ಕತ್ತಿ ಮಾತನಾಡಿ, ಶ್ರೀಗಳು ಸನಾತನ ಹಿಂದು ಧರ್ಮವನ್ನು ಉಳಿಸಿ, ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ವೀರಶೈವ ಲಿಂಗಾಯತ ಧರ್ಮದ ಏಕತೆಗೆ ಶ್ರಮಿಸಬೇಕು ಎಂದು ಹೇಳಿದರು.
ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರು ಹಾಗೂ ಸಾಧನಾ ಶ್ರೀ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಲಾಯಿತು. 
ಡಾ.ಮಹಾಂತೇಶ ಶಾಸಿö, ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ಅಧ್ಯಕ್ಷ ಮಹಾವೀರ ನಿಲಜಿಗಿ, ನಿರ್ದೇಶಕರಾದ ಪೃಥ್ವಿ ಕತ್ತಿ, ಗಜಾನನ ಕ್ವಳ್ಳಿ, ಸತ್ಯಪ್ಪ ನಾಯಿಕ, ನಂದು ಮುಡಸಿ, ರೆಸಿಡೆಂಟ್ ಇಂಜಿನಿಯರ್ ನೇಮಿನಾಥ ಖೇಮಲಾಪುರೆ, ಮುಖಂಡರಾದ ಶ್ರೀಶೈಲ ವರ್ಜಿ, ರಾಯಪ್ಪ ಡೂಗ, ಅಶೋಕ ಪಾಟೀಲ, ಸುನೀಲ ಪರ್ವತರಾವ, ರೋಹನ ನೇಸರಿ, ಗುರುರಾಜ ಕುಲಕರ್ಣಿ, ಪ್ರಭು ವಂಟಮೂರೆ, ಶೀತಲ ಬ್ಯಾಳಿ, ಅನಿಲ ಶೆಟ್ಟಿ, ಚನ್ನಪ್ಪ ಗಜಬರ, ಸುಭಾಸ ನಾಯಿಕ, ಬಿಇಒ ಪ್ರಭಾವತಿ ಪಾಟೀಲ, ಸವಿತಾ ಹಲಕಿ, ಎ.ಎಸ್.ಪದ್ಮನ್ನವರ ಇತರರಿದ್ದರು.
"

ಮೈಸೂರು ಮಹಾರಾಜರು ನಾಡಿಗಾಗಿ ಸಾಕಷ್ಟು ತ್ಯಾಗ ಮಾಡಿದ್ದಾರೆ. ರಾಜರು ಮೈಸೂರಿಗೆ ಸೀಮಿತಗೊಳ್ಳದೆ, ನಾಡಿಗೆ ಮಹಾರಾಜರಾಗಿದ್ದಾರೆ. ದೊರೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ ಹುಕ್ಕೇರಿಗೆ ಆಗಮಿಸಬೇಕೆಂಬ ಬಹುದಿನದ ಕನಸು ನನಸಾಗಿದೆ. ಯದುವೀರ ಒಡೆಯರು ಹುಕ್ಕೇರಿ ಹಿರೇಮಠಕ್ಕೆ ಆಗಮಿಸಿರುವುದು ಅಭಿನಂದನಾರ್ಹ ಸಂಗತಿ.