ಬೆಳಗಾವಿಯ ಆರ್‌ಪಿಡಿ ಸರ್ಕಲ್‌ದಲ್ಲಿ ಅಜಂತಾ ಹೋಟೆಲ್ ಬಂದ್ ಆಗಿರುವುದು.  
ಬೆಳಗಾವಿ

ಬಾಗಿಲು ಮುಚ್ಚಲಾರಂಭಿಸಿದ ಹೋಟೆಲ್‌ಗಳು

ಡಿ.ವಿ. ಕಮ್ಮಾರ
ಬೆಳಗಾವಿ: ವಾಣಿಜ್ಯ ಬಳಕೆಯ ಎಲ್‌ಪಿಸಿ ಗ್ಯಾಸ್ ಸಿಲಿಂಡರ್ ಕೊರತೆಯಿಂದ ಸಂಕಷ್ಟಕ್ಕಿಡಾಗಿರುವ ನಗರ ಹಾಗೂ ಜಿಲ್ಲೆಯ ವಿವಿಧ ತಾಲೂಕು ಕೇಂದ್ರಗಳಲ್ಲಿನ ಹತ್ತಕ್ಕೂ ಹೆಚ್ಚು ಹೋಟೆಲ್‌ಗಳು ಸೋಮವಾರ ಬಾಗಿಲು ಮುಚ್ಚಿವೆ.
ನಗರದ ಆರ್‌ಪಿಡಿ ವೃತ್ತದಲ್ಲಿನ ಅಜಂತಾ ಹೋಟೆಲ್ ಮುಂಭಾಗಕ್ಕೆ ಇಂಗ್ಲೀಷ್‌ನಲ್ಲಿ ಫಲಕ ಅಳವಡಿಸಿ ಬಂದ್ ಮಾಡಲಾಗಿದ್ದು, ಇದೇ ರೀತಿ ನಗರದ ಐದಾರು ಸಣ್ಣ ಪುಟ್ಟ ಹೋಟೆಲ್‌ಗಳು ಸೋಮವಾರದಿಂದ ಬಂದ್ ಆಗಿವೆ. ಹಬ್ಬದ ಸಂದರ್ಭದಲ್ಲಿ ಸಿಹಿ ಅಡುಗೆ ಮಾಡಬೇಕಾಗಿದ್ದು, ಬಹುತೇಕ ಊಟದ ಹೋಟೆಲ್‌ಗಳು ಹೋಳಿಗೆ ಮಾಡಲೇಬೇಕು. ಆದರೆ ಗ್ಯಾಸ ಕೊರತೆಯಿಂದ ಹಬ್ಬದ ಅಡುಗೆ ಮಾಡಲು ಆಗುವುದಿಲ್ಲವೆಂಬ ಕಾರಣಕ್ಕೆ ಹಬ್ಬದ ಮುಂಚೆಯೆ ಅನೇಕರು ಹೋಟೆಲ್ ಬಂದ್ ಮಾಡುತ್ತಿದ್ದಾರೆ.
ಹಲವು ಹೋಟೆಲ್‌ಗಳಲ್ಲಿ ದೋಸೆ, ಪುರಿ ಮಾಯವಾಗಿದೆ. ಇಡ್ಲಿ ಬೇಯಿಸುವುದು ಕಷ್ಟವಾಗುತ್ತಿದೆ. ಹೀಗಾಗಿ ಹಬ್ಬದ ಒಂದು ವಾರ ಹೋಟೆಲ್‌ಗಳನ್ನು ಬಂದ್ ಇಟ್ಟುಕೊಂಡು, ಊರಿಗೆ ಹೋಗಿ ಹಬ್ಬ ಮಾಡಿ ಬರೋಣವೆಂದುಕೊಂಡು ಅನೇಕರು ತಮ್ಮ ಹೋಟೆಲ್‌ಗಳ ಬಾಗಿಲು ಹಾಕುತ್ತಿದ್ದು, ಕಾರ್ಮಿಕರು ತಮ್ಮೂರಿನತ್ತ ಹೆಜ್ಜೆ ಹಾಕುತ್ತಿದ್ದಾರೆ.
ಸವದತ್ತಿ ವರದಿ: ಸವದತ್ತಿ ನಗರದಲ್ಲಿ ಹಲವು ಹೋಟೆಲ್‌ಗಳು ಸೌದೆ ಒಲೆ ಮೊರೆ ಹೋಗಿವೆ. ಆದರೆ ಎಷ್ಟೋ ಕಡೆ ಬಾಣಸಿಗರು ಕಟ್ಟಿಗೆ ಒಲೆ ಅಡುಗೆ ಮಾಡುವುದಕ್ಕೆ ಬಾರದೇ ಪರದಾಡುವಂತಾಗಿದೆ ಹೀಗಾಗಿ ಹೋಟೆಲ್ ನಡೆಸುವುದು ಕಷ್ಟವಾಗುತ್ತಿದೆ ಎಂದು ನಗರದ ಶಿವಾನಿ ಹೋಟೆಲ್ ಮ್ಯಾನೇಜರ್ ಮಂಜುನಾಥ ಶೆಟ್ಟಿ ತಿಳಿಸಿದ್ದಾರೆ.
16ಸವದತ್ತಿ2ಂ
ಸವದತ್ತಿಯ ಹೋಟೆಲ್ ನಲ್ಲಿ ಕಟ್ಟೆಗೆ ಒಲೆಯ ಮೇಲೆ ತಿಂಡಿ ತಯಾರಿಸುತ್ತಿರುವ ದೃಶ್ಯ.