ಜ್ಞಾನ ಪ್ರಭೋದಿನಿ ವಿದ್ಯಾಲಯದಲ್ಲಿ ನಡೆದ ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ಪ್ರೊ.ವಿಜಯಾ ಜೋಶಿ ಮಾತನಾಡಿದರು. ಡಾ.ಪಿ.ಎಂ.ಆಪ್ಟೆ, ಉಲ್ಲಾಸ ಗೋಡಬೊಲೆ, ರಾಜು ಗೋಡಬೊಲೆ ಇತರರಿದ್ದರು.
ರಾಮದುರ್ಗ:
ತುರನೂರ ಸಮೀಪದ ವಿಪ್ರ ವಿದ್ಯಾಸಂಸ್ಥೆಯ ಜ್ಞಾನ ಪ್ರಬೋಧಿನಿ ವಿದ್ಯಾಲಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಶಾಸೋಕ್ತ ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಅಕ್ಷರಾಭ್ಯಾಸ ಮಗುವಿನ ಜ್ಞಾನಾರ್ಜನೆಯ ಮೊದಲ ಹಂತವಾಗಿದೆ. ಪಾಲಕರು ಮಕ್ಕಳ ಕಲಿಕೆಯಲ್ಲಿ ಮಾರ್ಗದರ್ಶನ ನೀಡಿದರೆ ಅವರ ಭವಿಷ್ಯ ಉಜ್ವಲವಾಗುತ್ತದೆ ಎಂದರು.
ಸಂಸ್ಥೆಯ ಅಧ್ಯಕ್ಷ ಡಾ.ಪಿ.ಎಂ.ಆಪ್ಟೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಉಲ್ಲಾಸ ಗೋಡಬೊಲೆ, ರಾಜು ಗೋಡಬೊಲೆ, ಮುಖ್ಯಶಿಕ್ಷಕಿ ಎಸ್.ವಿ.ನಾಡಗೌಡರ, ವಿದ್ಯಾ ದ್ಯಾವಣ್ಣವರ, ದೀಪಾ ಮಾಳಿ ಇತರರಿದ್ದರು.