hindu 
ಬೆಳಗಾವಿ

ಜ.17ರಂದು ಬೈಲಹೊಂಗಲದಲ್ಲಿ ಹಿಂದು ಸಮಾವೇಶ

ಬೈಲಹೊಂಗಲ: ನಗರದ ವಿಜಯ ಸೋಷಿಯಲ್ ಕ್ಲಬ್ ಆವರಣದಲ್ಲಿ ಭಾನುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಜ.17ರಂದು ಸಂಜೆ 5.30ಕ್ಕೆ ವೀರರಾಣಿ ಕಿತ್ತೂರು ಚನ್ನಮ್ಮಸಮಾಧಿ ಸ್ಥಳದಲ್ಲಿ ಬೃಹತ್ ಹಿಂದು ಸಮಾವೇಶ ನಡೆಸಲು ನಿರ್ಧರಿಸಲಾಯಿತು.
ಅಂದು ಸಂಜೆ 4ಕ್ಕೆ ವೀರರಾಣಿ ಕಿತ್ತೂರು ಚನ್ನಮ್ಮ ಆಶ್ವಾರೂಢ ಮೂರ್ತಿ ಸ್ಥಳದಿಂದ ಬೃಹತ್ ಶೋಭಾಯಾತ್ರೆ ಹಾಗೂ ಪ್ರಮುಖ ಬೀದಿಗಳಲ್ಲಿ ಬೈಕ್ ರ‌್ಯಾಲಿ ನಡೆಸಲು ತೀರ್ಮಾನಿಸಿ, ನಾಡಿನ ವಿವಿಧ ಮಠಾಧೀಶರು ಹಾಗೂ ಗಣ್ಯರನ್ನು ಸಮಾವೇಶಕ್ಕೆ ಆಹ್ವಾನಿಸಲು ಚರ್ಚಿಸಲಾಯಿತು. ಸಿದ್ಧತೆ, ಸಂಘಟನೆ, ಪ್ರಚಾರ ವ್ಯವಸ್ಥೆ ಸೇರಿ ಅಗತ್ಯ ಸೌಕರ್ಯ ಒದಗಿಸಲು ವಿವಿಧ ಸಮಿತಿ ಜವಾಬ್ದಾರಿ ವಹಿಸಲಾಯಿತು.
ವಿಭಾಗ ಪ್ರಚಾರಕ ಸತೀಶ ಜಿ, ಜಿಲ್ಲಾ ಕಾರ್ಯವಾಹ ಮಾರುತಿ ಜಿ, ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ ಪ್ರಮೋದಕುಮಾರ ವಕ್ಕುಂದಮಠ ಹಾಗೂ ಉದ್ಯಮಿ ವಿಜಯ ಮೆಟಗುಡ್ಡ ಮಾತನಾಡಿದರು.
ಬಿಜೆಪಿ ಮಾಧ್ಯಮ ವಕ್ತಾರ ಎ್.ಎಸ್.ಸಿದ್ದನಗೌಡರ, ಮುಖಂಡರಾದ ಮಡಿವಾಳಪ್ಪ ಹೋಟಿ, ವಿರೂಪಾಕ್ಷ ಕೋರಿಮಠ, ಮಾಜಿ ಸೈನಿಕ ಗಂಗಪ್ಪ ಗುಗ್ಗರಿ, ಮುಶೆಪ್ಪ ಉಪ್ಪಾರ, ಮಲ್ಲಿಕಾರ್ಜುನ ಉಪ್ಪಿನ, ಮಹಾಂತೇಶ ಜಿಗಜಿನ್ನಿ, ಅಶೋಕ ಗುಂಡ್ಲೂರ, ಸಚಿನ ಕಡಿ, ಸುಭಾಷ ತುರಮರಿ, ಸುಭಾಷ ಬಾಗೇವಾಡಿ, ಲಕ್ಕಪ್ಪ ಕಾರಗಿ, ವಿಶಾಲ ಬೋಗೂರ, ನಿಂಗಪ್ಪ ಚೌಡನ್ನವರ, ಮಹಾಂತೇಶ ಹೊಂಗಲ, ಮೀನಾಕ್ಷಿ ಕುಡಸೋಮಣ್ಣವರ, ಮಧು ಬೆಳಗಾವಿ, ಮಹಾದೇವಿ ಉಪ್ಪಿನ, ನಾರಾಯಣ ನಲವಡೆ, ದಯಾನಂದ ಗೆಜ್ಜಿ, ಸಚಿನ ಚೀಲದ, ಬಸವರಾಜ ದೊಡಮನಿ, ಮಲ್ಲಮ್ಮನ ಬೆಳವಡಿ, ದೊಡವಾಡ, ಹೊಸೂರ ಹಾಗೂ ಮುರಗೋಡ ಸೇರಿ ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.