ಮೂಲವ್ಯಾಧಿ ಲೇಸರ್ ಸರ್ಜರಿ 
ಬೆಳಗಾವಿ

ಮೂಲವ್ಯಾಧಿ ಲೇಸರ್ ಸರ್ಜರಿ ಯಶಸ್ವಿ

ಧರ್ಮರಾಜ ರಾಮನಗೌಡ ಪಾಟೀಲ
ಬೆಳಗಾವಿ: ಇಲ್ಲಿನ ಶಹಾಪುರದ ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ ಸರ್ಜರಿ ವಿಭಾಗ ಆಸ್ಪತ್ರೆ ತಜ್ಞವೈದ್ಯ ಡಾ.ಸ್ಟಾಲಿನ್‌ಹೆಗ್ರೆ ಲೇಸರ್ ಹಿಮೊರಾಯ್ಡೋಪ್ಲಾಸ್ಟಿ ಮೂಲವ್ಯಾಧಿ ಸರ್ಜರಿ ಯಶಸ್ವಿಯಾಗಿ ನೆರವೇರಿಸಿದ್ದಾರೆ.
ಮೂಲವ್ಯಾಧಿಯಿಂದ ಬಳಲುತಿದ್ದ 38 ವರ್ಷ ವಯಸ್ಸಿನ ಶಹಾಪುರ ನಿವಾಸಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಒಳಪಡಿಸಲಾಯಿತು. ಹೊಲಿಗೆರಹಿತ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ವೈದ್ಯಕೀಯ ವಲಯದಲ್ಲಿ ಸಾಧನೆ ಮಾಡಿದ್ದಾರೆ.
ಲೇಸರ್ ಹೆಮೊರಾಯ್ಡಪ್ಲಾಸ್ಟಿ ಆಧುನಿಕ ಹಾಗೂ ಅತಿ ಕಡಿಮೆ ಗಾಯದ ಶಸ್ತ್ರಚಿಕಿತ್ಸೆ ವಿಧಾನವಾಗಿದ್ದು, ಮೂಲವ್ಯಾಧಿ (ಪೈಲ್ಸ್) ಚಿಕಿತ್ಸೆಗಾಗಿ ಬಳಸಲಾಗುತ್ತದೆ. ಸಾಮಾನ್ಯ ಶಸ್ತ್ರಚಿಕಿತ್ಸೆಯಂತೆ ಕತ್ತರಿಸುವ ಬದಲು, ವಿಶೇಷ ಲೇಸರ್ ಚಿಕಿತ್ಸೆ ನೀಡಲಾಗುತ್ತದೆ. ಇದರಿಂದ ಮೂಲವ್ಯಾಧಿ ಒಳಗಿನಿಂದಲೇ ಕುಗ್ಗುತ್ತದೆ.
ಅರಿವಳಿಕೆ ತಜ್ಞ ಡಾ.ಅರುಣ ಮಳಗೇರ ಹಾಗೂ ಇತರ ವೈದ್ಯರ, ವೈದ್ಯಕೀಯೇತರ ಸಿಬ್ಬಂದಿ ತಂಡದ ಕಾರ್ಯಕ್ಕೆ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, ನಿರ್ದೇಶಕರಾದ ಡಾ.ಎಚ್.ಬಿ. ರಾಜಶೇಖರ, ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ನವೀನ ಎನ್ ಹಾಗೂ ವೈದ್ಯಕೀಯ ಅಧೀಕ್ಷಕ ಡಾ.ಸಂಜಯ ಕಂಬಾರ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ ಶಹಾಪುರದ ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ ವೈದ್ಯರ ತಂಡ ಹೆಗ್ರೆ ಲೇಸರ್ ಹಿಮೋರಾಯ್ಡೋಪ್ಲಾಸ್ಟಿ ಮೂಲವ್ಯಾಧಿ ಸರ್ಜರಿ ಯಶಸ್ವಿಯಾಗಿದೆ. ಡಾ. ಸ್ಟಾಲಿನ ಹೆಗ್ರೆ, ಡಾ. ಅರುಣ ಮಳಗೇರ, ಡಾ. ಸಂಜಯ ಕಂಬಾರ, ನವೀನ ಎನ್. ಇತರರಿದ್ದರು.