ತೆಲಸಂಗ ಜ್ಞಾನಭಾರತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು. ಜಗದೀಶ ಕೆ.ಎಚ್., ಅಪ್ಪಾಸಾಹೇಬ ಪಾಟೀಲ, ಹಾಜಿಮಾ ಹೊನವಾಡ ಇತರರಿದ್ದರು. 
ಬೆಳಗಾವಿ

ವ್ಯಸನಮುಕ್ತ ಸಮಾಜ ನಿರ್ಮಿಸಲು ಸಹಕರಿಸಿ

ತೆಲಸಂಗ:
ಗ್ರಾಮದ ಜ್ಞಾನಭಾರತಿ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದುಶ್ಚಟಗಳು ಆರೋಗ್ಯ ಹಾಳು ಮಾಡುವ ಜತೆಗೆ ಇಡೀ ಕುಟುಂಬವನ್ನು ಬೀದಿಗೆ ತಳ್ಳುತ್ತವೆ. ವ್ಯಸನದಿಂದ ದೂರವಿರಲು ಸಂಸ್ಕಾರದ ಶಿಕ್ಷಣ ಅಗತ್ಯವಿದೆ ಎಂದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಜಿಲ್ಲಾ ಸದಸ್ಯ ಅಪ್ಪಾಸಾಹೇಬ ಪಾಟೀಲ ಮಾತನಾಡಿ, ಜನರು ದುಶ್ಚಟಗಳಿಗೆ ದಾಸರಾಗದೆ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಹೇಳಿದರು. ಡಾ.ಬಿ.ಎಸ್.ಕಾಮನ, ವಿಲಾಸ ಮೋರೆ, ಜಿ.ಎಸ್.ಮುಲ್ಲಾ, ಮಹಾಂತೇಶ ಪಿ.ಎಂ., ಹಾಜಿಮಾ ಹೊನವಾಡ ಇತರರಿದ್ದರು.