ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರಗೆ ಸಚಿವ ಸ್ಥಾನ ನೀಡಲು ಆಗ್ರಹಿಸಿ ಬೆಳಗಾವಿ ತಾಲೂಕಿನ ಬಡಸ ಕೆ.ಎಚ್. ಕ್ರಾಸ್ ಬಳಿ ಬೆಂಬಲಿಗರು ಅರೆಬೆತ್ತಲೆ ಪ್ರತಿಭಟನೆ ನಡೆಸಿದರು. ಮನ್ಸೂರ್ ಅತ್ತಾರ, ಅಶೋಕ ಅಂಗಡಿ, ಪರ್ವತಗೌಡ ಪಾಟೀಲ, ರವಿ ಮೇಳೇದ ಇತರರಿದ್ದರು. 
ಬೆಳಗಾವಿ

ಹೆಬ್ಬಾಳ್ಕರ ಬೆಂಬಲಿಗರ ಅರೆಬೆತ್ತಲೆ ಪ್ರತಿಭಟನೆ

ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರಗೆ ಸಚಿವ ಸ್ಥಾನ ನೀಡದಿರುವುದನ್ನು ಖಂಡಿಸಿ ಬೆಂಬಲಿಗರು ಗುರುವಾರ ತಾಲೂಕಿನ ಬಡಸ ಕೆಎಚ್ ಕ್ರಾಸ್ ಬಳಿ ಅರೆಬೆತ್ತಲೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮೀಣ ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಿದ್ದಾರೆ. ಈ ಹಿಂದೆ ಸಚಿವ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಅವರ ರಾಜಕೀಯ, ಸಂಘಟನಾ ಸಾಮರ್ಥ್ಯಕ್ಕೆ ಮನ್ನಣೆ ನೀಡಬೇಕು. ಇಲ್ಲದಿದ್ದರೆ ಪ್ರತಿಭಟನೆ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು. ಮನ್ಸೂರ್ ಅತ್ತಾರ, ಅಶೋಕ ಅಂಗಡಿ, ಪರ್ವತಗೌಡ ಪಾಟೀಲ, ರವಿ ಮೇಳೇದ, ಪ್ರಕಾಶ ಪಾಟೀಲ,

ಬಸವಂತ ನಾಯಕ ಇತರಿದ್ದರು.