ಸತ್ತಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಲಕ್ಷ್ಮಣ ಸವದಿ ಚಾಲನೆ ನೀಡಿದರು. ಜಡೆಪ್ಪ ಕುಂಬಾರ, ಪ್ರಕಾಶ ಭೂಷಣ್ಣವರ, ಸಂಜೀವ ಜಮಖಂಡಿ ಇತರರಿದ್ದರು.
ನಂದೇಶ್ವರ: ಗ್ರಾಮೀಣ ಭಾಗದ ಗರಡಿಮನೆಗಳು ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಪೂರಕವಾಗಿದ್ದು, ದೇಹವನ್ನು ಸದೃಢವಾಗಿಸುತ್ತವೆ. ಸತ್ತಿ ಗ್ರಾಮದಲ್ಲಿ ಅನೇಕ ಕುಸ್ತಿಪಟುಗಳು ಇರುವುದು ಗ್ರಾಮೀಣ ಕ್ರೀಡೆಗಳ ಮಹತ್ವ ತಿಳಿಸುತ್ತದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಸಮೀಪದ ಸತ್ತಿ ಗ್ರಾಮದಲ್ಲಿ ಶನಿವಾರ ಗರಡಿಮನೆ ನಿರ್ಮಾಣ ಹಾಗೂ ಹರಳಯ್ಯ ಓಣಿಯಲ್ಲಿ ಸಿಸಿರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಗರಡಿಮನೆಯಲ್ಲಿ ಯುವಜನರು ವ್ಯಾಯಾಮ ಮಾಡಬೇಕು. ಹಿರಿಯ ಕುಸ್ತಿಪಟುಗಳು ಕಿರಿಯರಿಗೆ ತರಬೇತಿ ನೀಡಬೇಕು. ಗ್ರಾಮೀಣ ಕ್ರೀಡೆಗಳ ಉಳಿವಿಗೆ ಪ್ರತಿಯೊಬ್ಬರೂ ಶ್ರಮಿಸಬೇಕು. ಕ್ರೀಡೆಗಳು ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಲು ಸಹಕಾರಿಯಾಗಿವೆ. ಗ್ರಾಮೀಣ ಭಾಗದ ಜನರಿಗೆ ವಿವಿಧ ಮೂಲಸೌಲಭ್ಯ ಹಂತ ಹಂತವಾಗಿ ಕಲ್ಪಿಸಲಾಗುವುದು ಎಂದರು.
ತಾಪಂ ಮಾಜಿ ಸದಸ್ಯ ಜಡೆಪ್ಪ ಕುಂಬಾರ, ಪ್ರಕಾಶ ಭೂಷಣ್ಣವರ, ಗ್ರಾಪಂ ಉಪಾಧ್ಯಕ್ಷ ಸಂಜೀವ ಜಮಖಂಡಿ, ಪಿಡಿಒ ಭುವನೇಶ್ವರಿ ಹಿರೇಮಠ, ಸಿದ್ದಯ್ಯ ಮಠಪತಿ, ಮಹಾದೇವಗೌಡ ಪಾಟೀಲ, ಸುರೇಶ ಲಿಂಗರೆಡ್ಡಿ, ಶ್ರೀಶೈಲ ಜಮಖಂಡಿ, ಹಣಮಂತ ಜಗದೇವ, ಶಿವರುದ್ರ ಘೂಳಪ್ಪನವರ, ಗೋರಖನಾಥ ಹೊನಕಡಬಿ, ಪರಪ್ಪ ಚಮಕೇರಿ, ಮೋಹನ ದೊಡ್ಡಮನಿ, ರಾವಸಾಬ್ ಜಿನರಾಳ, ಅಶೋಕ ಕಾಂಬಳೆ, ರಾಮಪ್ಪ ಹೊನಕಡಬಿ, ಹನಮಂತ ಲಿಂಗರೆಡ್ಡಿ, ಹಣಮಂತ ತೇಲಿ, ಫಿರೋಜ್ ಅತ್ತಾರ್, ಅಸ್ಕರ್ ಅತ್ತಾರ್, ವಿನಾಯಕ ಬಾಗಡಿ, ಬುರಾನ್ ಮೀರಾಬಾಯಿ, ಶಂಕರ ಜಕ್ಕಪ್ಪನವರ, ಸತ್ಯಪ್ಪ ಮಳಲಿ ಇತರರಿದ್ದರು.