ಸಾಂಗಲಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಡಾ.ಚಂದ್ರಶೇಖರ ಹಳಿಂಗಳೆ ಮಾತನಾಡಿದರು. ಅಂಜುಮ್ ಶೇಖ್, ಪ್ರೊ.ಡಾ.ವಿ.ಎ.ರಣಕಾಂಬೆ, ಡಾ.ಎ.ಆರ್.ಸುಪಲೆ, ಡಾ.ಕೃಷ್ಣಾ ಭವಾರಿ ಇತರರಿದ್ದರು.
ಕಾಗವಾಡ: ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ, ಧ್ಯಾನ, ನಿದ್ರೆ ಮತ್ತು ಸಕಾರಾತ್ಮಕ ಚಿಂತನೆ ಅಗತ್ಯ ಎಂದು ಮಿರಜ್‌ನ ನಿರ್ಮಲ ಆಸ್ಪತ್ರೆ, ವ್ಯಸನಮುಕ್ತಿ ಮತ್ತು ಪುನರ್ವಸತಿ ಕೇಂದ್ರದ ಮನೋವೈದ್ಯ ಡಾ. ಚಂದ್ರಶೇಖರ ಹಳಿಂಗಳೆ ಹೇಳಿದರು.
ಮಹಾರಾಷ್ಟ್ರದ ಸಾಂಗಲಿಯಲ್ಲಿ ಡಾ.ಪತಂಗರಾವ ಕದಮ್ ಕಾಲೇಜು ಮತ್ತು ಶಿವಾಜಿ ವಿಶ್ವವಿದ್ಯಾಲಯ ಕೊಲ್ಲಾಪುರ ಸಂಯುಕ್ತಾಶ್ರಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದರು.
ತಂಬಾಕು, ಮದ್ಯ ಮತ್ತು ಮಾದಕವಸ್ತುಗಳ ಸೇವನೆ ಮಾನಸಿಕ ಮತ್ತು ಸಾಮಾಜಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಯುವಜನರು ವ್ಯಸನದಿಂದ ದೂರವಿದ್ದು, ಆರೋಗ್ಯಕರ ಜೀವನ ಶೈಲಿ ಅಳವಡಿಸಿಕೊಳ್ಳಲು ಮನವಿ ಮಾಡಿದರು.
ಪ್ರಾಂಶುಪಾಲ ಪ್ರೊ.ಡಾ.ವಿ.ಎ.ರಣಕಾಂಬೆ, ಉಪ ಪ್ರಾಂಶುಪಾಲ ಡಾ.ಎ.ಆರ್.ಸುಪಲೆ, ಡಾ.ಕೃಷ್ಣಾ ಭವಾರಿ, ಪ್ರೊ.ನಳೇಶ ಬಹಿರಾಮ, ಪ್ರೊ.ಮಂಗೇಶ ಗವಿತ, ಪ್ರೊ.ನಂದಕುಮಾರ ನಟಕೆ, ಡಾ.ರೂಪಾಲಿ ಕಾಂಬಳೆ, ಪ್ರೊ.ಭಾರತಿ ಭಾವಿಕಟ್ಟಿ, ಡಾ.ವರ್ಷಾ ಕುಂಭಾರ, ಪ್ರೊ.ಸತೀಶ ಕಾಂಬಳೆ ಇತರರಿದ್ದರು.