ಗುಡಸ ಸರ್ಕಾರಿ ಶಾಲೆಯಲ್ಲಿ ಪಿಕೆಪಿಎಸ್ ವತಿಯಿಂದ ಆರೋಗ್ಯ ತಪಾಸಣೆ ಶಿಬಿರ ಜರುಗಿತು. ಮಲ್ಲಿಕಾರ್ಜುನ ನರಸನ್ನರ, ರಾಯಪ್ಪ ಡೂಗ, ಸದಾನಂದ ಹಿರೇಮಠ ಇತರರಿದ್ದರು.
ಹುಕ್ಕೇರಿ: ಪಿಕೆಪಿಎಸ್ ಸಂಘದ ಸದಸ್ಯರ ಜತೆಗೆ ಗ್ರಾಮಸ್ಥರ ಆರೋಗ್ಯ ತಪಾಸಣೆಯಂತಹ ಹಲವು ಕಾರ್ಯಕ್ರಮ ಸೊಸೈಟಿ ಆಯೋಜಿಸುತ್ತಾ ಬಂದಿದೆ ಎಂದು ಗುಡಸ ಪಿಕೆಪಿಎಸ್ ಅಧ್ಯಕ್ಷ ಮಲ್ಲಿಕಾರ್ಜುನ ನರಸನ್ನವರ ಹೇಳಿದರು.
ಗುಡಸ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಣ್ಣು, ಆರೋಗ್ಯ ತಪಾಸಣೆ ಶಿಬಿರದಲ್ಲಿ ಅವರು ಮಾತನಾಡಿದರು.
ನಿರ್ದೇಶಕ ಸದಾನಂದ ಹಿರೇಮಠ ಮಾತನಾಡಿ, ಸಂಘ ಆರ್ಥಿಕತೆ ಜತೆಗೆ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುತ್ತಿದ್ದೆ. ರೈತರಿಗೆ ಸಮಗ್ರ ಕೃಷಿ ನೀತಿ, ಸುಸ್ಥಿರ ಕಬ್ಬು ಬೆಳೆ ಮೊದಲಾದ ತಿಳುವಳಿಕೆ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದರು.
ವೈದ್ಯಾಧಿಕಾರಿ ಡಾ.ಮಯೂರ ಕುಲಕರ್ಣಿ ಮತ್ತು ಆಸ್ಪತ್ರೆ ವ್ಯವಸ್ಥಾಪಕ ಬಾಳೇಶ ಬಾಗಿ ನೇತೃತ್ವದಲ್ಲಿ ತಪಾಸಣಾ ಶಿಬಿರ ನಡೆಯಿತು.
ಪಿಕೆಪಿಎಸ್ ಸಂಘದ ಉಪಾಧ್ಯಕ್ಷ ರಾಯಪ್ಪ ಡೂಗ, ನಿರ್ದೇಶಕ ಸದಾನಂದ ಹಿರೇಮಠ, ಸಿದಗೌಡ ಪಾಟೀಲ, ಬಾಬು ಜಾರಕಿಹೊಳಿ, ಅಲಗೌಡ ದೊಡದನ್ನವರ, ಅಡಿವೆಪ್ಪ ಮಗದುಮ್ಮ, ಮಲಗೌಡ ದೇಸಾಯಿ, ಮಹಾದೇವಿ ಪಾಟೀಲ, ಮೀನಾಕ್ಷಿ ಚಂದರಗಿ, ರಾಜು ಬಂಗಾರಿ, ಸಿಇಒ ಎಸ್.ಎಸ್.ಮಲ್ಲಾಪುರೆ ಇತರರಿದ್ದರು.