ಕೊಳವಿ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ನಿರ್ಮಾಣ ಕಾಮಗಾರಿಗೆ ಮುಖಂಡ ಸುರೇಶ ಸನದಿ ಭೂಮಿಪೂಜೆ ನೆರವೇರಿಸಿದರು. ಬಸಯ್ಯ ಸ್ವಾಮೀಜಿ, ಕರೆಪ್ಪ ಬಡಿಗವಾಡ, ಲಕ್ಷಪ್ಪ ಕಾಂಬಳಿ ಇತರರಿದ್ದರು. 
ಬೆಳಗಾವಿ

ಜನರಿಗೆ ಆರೋಗ್ಯ ಕೇಂದ್ರ ಸಹಕಾರಿ

ಪ್ರಮುಖ ಮುಖ್ಯಾಂಶಗಳು

  • ಸುರೇಶ ಸನದಿ ಅನಿಸಿಕೆ
  • ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ
ಮಮದಾಪುರ: ಗ್ರಾಮೀಣ ಭಾಗದ ಜನರು ಹಾಗೂ ತಾಯಿ-ಮಗುವಿಗೆ ತುರ್ತು ಚಿಕಿತ್ಸೆ ನೀಡಲು ಆರೋಗ್ಯ ಕೇಂದ್ರ ಸಹಕಾರಿಯಾಗಲಿದೆ ಎಂದು ಮುಖಂಡ ಸುರೇಶ ಸನದಿ ಹೇಳಿದರು.
ಗೋಕಾಕ ತಾಲೂಕಿನ ಕೊಳವಿ ಗ್ರಾಮದಲ್ಲಿ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ 15ನೇ ಹಣಕಾಸು ಯೋಜನೆಯಡಿ 55 ಲಕ್ಷ ರೂ. ವೆಚ್ಚದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ನಿರ್ಮಾಣ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಗುಣಮಟ್ಟದ ಕಾಮಗಾರಿ ಕೈಗೊಳ್ಳುವ ಜತೆಗೆ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಶಾಸಕರು ಗುತ್ತಿಗೆದಾರರಿಗೆ ಸೂಚಿಸಿದ್ದಾರೆ. ಜನರು ಸೌಲಭ್ಯ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಗ್ರಾಪಂ ಮಾಜಿ ಅಧ್ಯಕ್ಷ ಕರೆಪ್ಪ ಬಡಿಗವಾಡ ಮಾತನಾಡಿದರು. ಬಸಯ್ಯ ಸ್ವಾಮೀಜಿ, ಲಕ್ಷಪ್ಪ ಕಾಂಬಳಿ, ಅಶೋಕ ಸಿಂಗಾಡಿ, ಶಂಕರ ವನಕಿ, ಶಿವಾನಂದ ಮಮದಾಪುರ, ಮಾರುತಿ ಹಂಜಿ, ಭೀಮಗೌಡ ಪಾಟೀಲ, ಮಾರುತಿ ಹೊಸಮನಿ, ರಾಮಣ್ಣ ಖಾನಾಪುರ, ಅಡಿವೆಪ್ಪ ಪಾಟೀಲ, ಅಶೋಕ ಸಿಂಗಾಡಿ, ಮಹಾದೇವ ಭಜಂತ್ರಿ, ಸಂಜು ಹಿರಟ್ಟಿ, ಎ.ಬಿ.ಅಂಗಡಿ, ಚನ್ನಯ್ಯ ಮಠಪತಿ, ಅಜ್ಜಪ್ಪ ಕರಿಗಾರ, ಭೀಮಶಿ ಕೊತ್ತಲ, ಗುತ್ತಿಗೆದಾರ ಚೇತನ ಗೋಣಿ, ಕಿರಣ ಗೋಣಿ ಇತರರಿದ್ದರು.