ಹಾರೂಗೇರಿ ಜನತಾ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಸ್ನೇಹಸಮ್ಮೇಳನಲ್ಲಿ ಚನ್ನವೀರ ಮುಂಗುರವಾಡಿ ಅವರನ್ನು ಸನ್ಮಾನಿಸಲಾಯಿತು. ಲಕ್ಕಪ್ಪ ಬಿದರಿ, ಭೀಮಗೌಡ ಕರ್ಣವಾಡಿ, ವಿಠ್ಠಲ ತೇರದಾಳ ಇತರರಿದ್ದರು.
ಹಾರೂಗೇರಿ: ಮಕ್ಕಳ ಮನಸ್ಸು ಅರಿತು ಶಿಕ್ಷಣ ನೀಡಿದಾಗ ಮಾತ್ರ ಅವರ ಉಜ್ವಲ ಭವಿಷ್ಯ ರೂಪಿಸಲು ಸಾಧ್ಯ ಎಂದು ಹುಬ್ಬಳಿ ಸಿದ್ಧಾರೂಢ ಮಠದ ಅಧ್ಯಕ್ಷ ಚನ್ನವೀರ ಮುಂಗುರವಾಡಿ ಹೇಳಿದರು.
ಪಟ್ಟಣದ ಜನತಾ ಶಿಕ್ಷಣ ಸಂಸ್ಥೆ ಆವರಣದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹಸಮ್ಮೇಳನ ಹಾಗೂ ಹತ್ತನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದಲ್ಲಿ ಮಾತನಾಡಿ, ಮಕ್ಕಳೊಂದಿಗೆ ಗುರುಗಳು ಉತ್ತಮ ಬಾಂಧವ್ಯ ಇರಿಸಿಕೊಳ್ಳಬೇಕು ಎಂದರು.
ಶಿಕ್ಷಣ ಸಂಯೋಜಕ ಲಕ್ಕಪ್ಪ ಬಿದರಿ ಮಾತನಾಡಿದರು.
ಸಂಸ್ಥೆಯ ಸಂಸ್ಥಾಪಕ ದಿ.ಭಗವಂತಪ್ಪ ಕರ್ಣವಾಡಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ, ಕ್ರೀಡಾ ವಿಭಾಗದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿಪತ್ರ ನೀಡಿ ಗೌರವಿಸಲಾಯಿತು.
ಸಂಸ್ಥೆ ಅಧ್ಯಕ್ಷ ಭೀಮಗೌಡ ಕರ್ಣವಾಡಿ ಮಾತನಾಡಿದರು.
ಮನರಂಜನಾ ಕಾರ್ಯಕ್ರಮಗಳು ಜರುಗಿದವು. ಶಿಕ್ಷಣ ಸಂಯೋಜಕ ವಿಠ್ಠಲ ತೇರದಾಳ, ವಿಲಾಸಮತಿ ಕರ್ಣವಾಡಿ, ಅನಂತ ಕರ್ಣವಾಡಿ, ರಾಜು ಕರ್ಣವಾಡಿ, ಭರಮು ಕರ್ಣವಾಡಿ, ಟಿ.ಬಿ.ಸಾಜನೆ, ಡಾ.ಭಾರತೇಶ ಚೌಗಲಾ, ಮಹೇಶ ಮುಂಗುರವಾಡಿ, ಬಿ.ಎಂ.ಚಿAಚಲಿಕರ, ಕೆ.ಎಸ್.ಚೌಗಲಾ, ಸುಭಾಸ ಭರಮರಾವತ್, ಜಿ.ಎಸ್.ಕುಲಕರ್ಣಿ, ಎ.ಜೆ.ಚೌಗಲಾ, ಎ.ಬಿ.ಪಾಟೀಲ, ಎ.ಬಿ.ಕಿಲ್ಲೇದಾರ, ಟಿ.ಪಿ.ಕಾಶೆಟ್ಟಿ, ಎಸ್.ಡಿ. ಕಾಗವಾಡೆ, ಆದಿತ್ಯ ಬುರ್ಲಟ್ಟಿ, ಆದರ್ಶ ಉಪಾಧ್ಯ, ಸಾಗರ ಹುಲ್ಲೋಳಿ ಇತರರಿದ್ದರು.