ಬೈಲಹೊಂಗಲದಲ್ಲಿ ಹಮ್ಮಿಕೊಂಡಿದ್ದ ರಾಜಯೋಗ ಭವನವನ್ನು ಗಣ್ಯರು ಉದ್ಘಾಟಿಸಿದರು. ಡಾ.ಬಿ.ಕೆ.ಮೃತ್ಯುಂಜಯ, ನೀಲಕಂಠ ಸ್ವಾಮೀಜಿ, ಪ್ರಭು ನೀಲಕಂಠ ಸ್ವಾಮೀಜಿ, ಅಂಬಿಕಾ ಅಕ್ಕ, ರೋಹಿಣಿ ಬಸ್ಸಾಪೂರೆ ಇತರರಿದ್ದರು.
- ಡಾ.ಬಿ.ಕೆ.ಮೃತ್ಯುಂಜಯ ಅನಿಸಿಕೆ
- ರಾಜಯೋಗ ಭವನ ಲೋಕಾರ್ಪಣೆ
ಬೈಲಹೊಂಗಲ: ವಿಶ್ವದಾದ್ಯಂತ ಪ್ರತಿಯೊಬ್ಬರೂ ಸುಖ, ಶಾಂತಿ ಹಾಗೂ ಸೌಹಾರ್ದದಿಂದ ಬದುಕಬೇಕೆಂದು ಪ್ರಜಾಪಿತ ಓಂ ಶಾಂತಿ ಕೇಂದ್ರಗಳ ಮೂಲಕ ಜಾತಿ, ಮತ, ಪಂಥ ಲೆಕ್ಕಿಸದೆ ಪರಮಾತ್ಮನ ಬೋಧನೆ ಮಾಡಲಾಗುತ್ತಿದೆ ಎಂದು ರಾಜಸ್ಥಾನದ ಪ್ರಜಾಪಿತ ಬ್ರಹ್ಮಾಕುಮಾರಿ ಕೇಂದ್ರದ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ರಾಜಯೋಗಿ ಡಾ.ಬಿ.ಕೆ.ಮೃತ್ಯುಂಜಯ ಹೇಳಿದರು.
ನಗರದ ಮುರಕಿಬಾವಿ ರಸ್ತೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ನೂತನ ರಾಜಯೋಗ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮುರಗೋಡ ಮಹಾಂತ ದುರದುಂಡೀಶ್ವರ ಮಠದ ನೀಲಕಂಠ ಸ್ವಾಮೀಜಿ ಆಶೀರ್ವಚನ ನೀಡಿ, ಬೈಲಹೊಂಗಲ ನಾಡಿನಲ್ಲಿ ಕಳೆದ ಮೂರು ದಶಕಗಳಿಂದ ಪ್ರಜಾಪಿತ ಬ್ರಹ್ಮಕುಮಾರಿ ಕೇಂದ್ರ ಆಧ್ಯಾತ್ಮಿಕ ಹಾಗೂ ಪರಮಾತ್ಮನ ದಿವ್ಯ ಸಂದೇಶ ನೀಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು.
ಶಾಖಾ ವ್ಯವಸ್ಥಾಪಕ ಬಿ.ಕೆ.ಬಸವರಾಜ ಪ್ರಾಸ್ತಾವಿಕ ಮಾತನಾಡಿದರು. ಓಂ ಶಾಂತಿಯ ಧ್ವಜಾರೋಹಣ, ರಾಜಯೋಗ ಭವನ ಹಾಗೂ ಬಾಬಾ ಪ್ರಾರ್ಥನಾ ಮಂದಿರ ಉದ್ಘಾಟನೆ ನೆರವೇರಿಸಲಾಯಿತು. ಸಾಧಕರನ್ನು ಸನ್ಮಾನಿಸಲಾಯಿತು.
ಶಾಖಾ ಮೂರುಸಾವಿರ ಮಠದ ಪ್ರಭು ನೀಲಕಂಠ ಸ್ವಾಮೀಜಿ, ಕೇಂದ್ರದ ಸಂಚಾಲಕಿ ಅಂಬಿಕಾ ಅಕ್ಕ, ಶಾಖೆ ಸಂಚಾಲಕಿ ಪ್ರಭಾ ಅಕ್ಕ, ನ್ಯಾಯಾಧೀಶೆ ರೋಹಿಣಿ ಬಸ್ಸಾಪೂರೆ, ಶಾಸಕರಾದ ಮಹಾಂತೇಶ ಕೌಜಲಗಿ, ಬಾಬಾಸಾಹೇಬ ಪಾಟೀಲ, ಮಾಜಿ ಶಾಸಕರಾದ ಡಾ.ವಿಶ್ವನಾಥ ಪಾಟೀಲ, ಮಹಾಂತೇಶ ದೊಡಗೌಡರ, ಉದ್ಯಮಿ ವಿಜಯ ಮೆಟಗುಡ್ಡ, ಮಲ್ಲಪ್ಪ ಮುರಗೋಡ, ಶಂಕರ ಮಾಡಲಗಿ, ಚಿತ್ರನಟ ಶಿವರಂಜನ ಬೋಳಣ್ಣವರ, ಬಿ.ಬಿ.ಗಣಾಚಾರಿ, ಸೋಮೇಶ್ವರ ಶುಗರ್ಸ್ ಮಾಜಿ ಉಪಾಧ್ಯಕ್ಷ ಮಹಾಂತೇಶ ಮತ್ತಿಕೊಪ್ಪ, ವಿರೂಪಾಕ್ಷಯ್ಯ ಕೋರಿಮಠ, ಪುರಸಭೆ ಮಾಜಿ ಅಧ್ಯಕ್ಷ ವಿಜಯ ಬೋಳಣ್ಣವರ, ಮಡಿವಾಳಪ್ಪ ಹೋಟಿ, ಬಸವರಾಜ ಭರಮಣ್ಣವರ, ಮೀರಾ ಅಕ್ಕ ಇತರರಿದ್ದರು. ಬಿ.ಕೆ ಸುಲೋಚನಾ ಅಕ್ಕ ಸ್ವಾಗತಿಸಿದರು. ಬಿ.ಕೆ.ನಿಲೇಶ, ಬಿ.ಕೆ.ರೇಣುಕಾ ನಿರೂಪಿಸಿದರು. ಬಿ.ಕೆ.ಪ್ರಕಾಶ ಬೆಟಗೇರಿ ವಂದಿಸಿದರು.