ಹುಕ್ಕೇರಿ ಪಿಕಾರ್ಡ್ ಬ್ಯಾಂಕ್ ಆವರಣದಲ್ಲಿ ಎಸ್‌ಎಸ್‌ಎಲ್‌ಸಿ ಸಾಧಕ ವಿದ್ಯಾರ್ಥಿಗಳನ್ನು ಶಾಸಕ ನಿಖಿಲ ಕತ್ತಿ ಸನ್ಮಾನಿಸಿದರು. ಗುರುರಾಜ ಕುಲಕರ್ಣಿ, ಎಚ್.ಎಲ್.ಪೂಜೇರಿ, ಪ್ರಭಾವತಿ ಪಾಟೀಲ, ಎಸ್.ಆರ್. ಕರ್ಕಿನಾಯಿಕ ಇತರರಿದ್ದರು.
ಪಟ್ಟಣದ ಪಿಕಾರ್ಡ್ ಬ್ಯಾಂಕ್ ಆವರಣದಲ್ಲಿ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ತಾಲೂಕಿಗೆ ಅಗ್ರ 3 ಸ್ಥಾನ ಗಳಿಸಿದ ಹೆಬ್ಬಾಳ ಸರ್ಕಾರಿ ಕೆಪಿಎಸ್ ಪ್ರೌಢಶಾಲೆಯ ರೋಹಿಣಿ ಜರಳಿ, ಹುಕ್ಕೇರಿ ಜಿಮಖಾನ್ ಆಂಗ್ಲ ಮಾಧ್ಯಮ ಪ್ರೌಢವಿಭಾಗದ ನಿಖಿತಾ ಮುದವೀರ ಹಾಗೂ ಕೋಚರಿ ಸರ್ಕಾರಿ ಪ್ರೌಢಶಾಲೆಯ ನಾಗರಾಜ ಕುರಬರ ಅವರನ್ನು ಸೋಮವಾರ ಸನ್ಮಾನಿಸಿ ಮಾತನಾಡಿದರು.
ಬಿಇಒ ಪ್ರಭಾವತಿ ಪಾಟೀಲ ಮಾತನಾಡಿದರು. ಮುಖಂಡರಾದ ಗುರುರಾಜ ಕುಲಕರ್ಣಿ, ಎಸ್.ಆರ್. ಕರ್ಕಿನಾಯಿಕ, ಎಂ.ಬಿ.ನಾಯಿಕ, ಶಹಜಾನ್ ಬಡಗಾಂವಿ, ಎಚ್.ಎಲ್. ಪೂಜೇರಿ, ಭೀಮಗೌಡ ಗಿರಿಗೌಡನವರ, ಗುರಪ್ಪ ತಳವಾರ, ದುರದುಂಡಿ ಪಾಟೀಲ, ರಾಜು ಮುಜಾವರ್, ಶಿಕ್ಷಣ ಇಲಾಖೆಯ ಶಿವಾನಂದ ಗುಂಡಾಳೆ, ಬಿ.ಬಿ.ಪಾರ್ಥನಳ್ಳಿ, ಎಂ.ಡಿ.ಬಡಿಗೇರ, ಆರ್.ಬಿ. ವಠಾರೆ ಇತರರಿದ್ದರು.