ಸವದತ್ತಿ ತಾಲೂಕಿನ ಮುಗಳಿಹಾಳ ಗ್ರಾಮದ ನಿವಾಸಿ ಮೃತ ಗ್ರಾಹಕ ಮಾಯಪ್ಪ ಜಿಂಗಿ ಅವರ ವಿಮೆ ಪರಿಹಾರ ಹಣದ ಚೆಕ್ನ್ನು ಈಚೆಗೆ ಯೂನಿಯನ್ ಬ್ಯಾಂಕ್ ಆ್ ಇಂಡಿಯಾ ಅಧಿಕಾರಿಗಳು ವಾರಸುದಾರರಿಗೆ ಹಸ್ತಾಂತರಿಸಿದರು. ಮನೋಜ ಅಶೋಕ ಭೋಯರ್, ಬ್ರಿಜೇಶ್ ಕುಮಾರ ಇದ್ದರು.
ಬೆಳಗಾವಿ: ಜಿಲ್ಲೆಯ ಸವದತ್ತಿ ತಾಲೂಕಿನ ಮುಗಳಿಹಾಳ ಯೂನಿಯನ್ ಬ್ಯಾಂಕ್ ಆ್ ಇಂಡಿಯಾ ಶಾಖೆಯ ಗ್ರಾಹಕ ಮರಣ ಹೊಂದಿದ 15 ದಿನಗಳಲ್ಲಿ ಆತನ ವಾರಸುದಾರರ ಖಾತೆಗೆ ಪ್ರಧಾನಮಂತ್ರಿ ಸುರಾ ಬಿಮಾ ಯೋಜನೆ ಅಡಿಯಲ್ಲಿ ವಿಮೆ ಹಣ ಜಮಾ ಮಾಡುವಲ್ಲಿ ಬ್ಯಾಂಕ್ ಯಶಸ್ವಿಯಾಗಿದೆ.
ಬ್ಯಾಂಕಿನ ಗ್ರಾಹಕ ಮತ ಮಾಯಪ್ಪ ಲಕ್ಕಪ್ಪ ಜಿಂಗಿ ಅವರ ಹೆಸರಿನಲ್ಲಿದ್ದ ವಿಮೆ ಪ್ರಕರಣವನ್ನು ಇತ್ಯರ್ಥಗೊಳಿಸಿ 2 ಲಕ್ಷ ರೂ.ಮೊತ್ತದ ಪರಿಹಾರ ಹಣದ ಚೆಕ್ ಅನ್ನು ಈಚೆಗೆ ಮೃತನ ಪತ್ನಿ ಬಾಗವ್ವ ಮಾಯಪ್ಪ ಜಿಂಗಿ ಅವರಿಗೆ ಹಸ್ತಾಂತರಿಸಲಾಗಿದೆ. ಶಾಖಾ ಮುಖ್ಯಸ್ಥ ಮನೋಜ ಅಶೋಕ ಭೋಯರ್, ಉಪ ಶಾಖಾ ಮುಖ್ಯಸ್ಥ ಬ್ರಿಜೇಶ್ ಕುಮಾರ ಇದ್ದರು.