ಗಲಾಟೆಯ ಸಿಸಿ ಕ್ಯಾಮರಾ ದೃಶ್ಯ.
ಬೆಳಗಾವಿ : ಯೂನಿಯನ್ ಜಿಮಖಾನ್ ಕ್ಲಬ್‌ನಲ್ಲಿ ಮಂಗಳವಾರ ರಾತ್ರಿ ನಡೆದಿದ್ದ ಫೈರಿಂಗ್‌ಗೆ ಸಂಬಂಧಿಸಿ ಸಂಬಂಧಿಸಿ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಸದ್ಯಕ್ಕೆ ಯಾವ ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿಬಿದ್ದಿಲ್ಲ. ಹಳೇ ವೈಷಮ್ಯದಿಂದಾಗಿಯೇ ಸುರೇಶ ಜಾಲಗಾರ ಮೇಲೆ ಪ್ರಫುಲ್ ಪಟೇಲ್ ತಂಡ ದಾಳಿ ಮಾಡಿದ್ದಾನೆ. ಆರೋಪಿ ಮತ್ತು ದೂರುದಾರ ಇಬ್ಬರಿಗೂ ಅಪರಾಧ ಹಿನ್ನೆಲೆ ಇದೆ. ಹಲವು ಪ್ರಕರಣಗಳಲ್ಲಿ ಇಬ್ಬರೂ ಆರೋಪಿಳಾಗಿದ್ದಾರೆ.
ಪ್ರಫುಲ್ ಪಟೇಲ್ ಮತ್ತು ಇತರರ ಮೇಲೆ ಸುರೇಶ ಜಾಲಗಾರ ಕೊಲೆಯತ್ನದ ದೂರು ದಾಖಲಿಸಿದ್ದಾನೆ. ಜತೆಗೆ ಶಸ್ತ್ರಾಸ್ತ ಕಾಯ್ದೆಯಡಿಯಲ್ಲೂ ಪಟೇಲ್ ತಂಡದ ಮೇಲೆ ಕೇಸ್ ಆಗಿದೆ. ಗಲಾಟೆಗೆ ಸಂಬಂಧಿಸಿದ ಎರಡೂ ತಂಡದ ಮೇಲೆ ಕ್ಲಬ್ ಮ್ಯಾನೇಜರ್ ಮತ್ತೊಂದು ದೂರು ದಾಖಲಿಸಿದ್ದಾನೆ. ಸುರೇಶ ಜಾಲಗಾರ, ರಾಜು ಕಡೋಲ್ಕರ, ಇಮ್ರಾನ ಪಠಾಣ, ಕುಂದನ ಯಳ್ಳೂರಕರ ಕ್ಲಬ್‌ನ ಆಸ್ತಿಗೆ ಹಾನಿ ಮಾಡಿರುವ ಆರೋಪ ಮಾಡಲಾಗಿದೆ.
ಮಂಗಳವಾರ ರಾತ್ರಿಯ ಗಲಾಟೆಗೆ ಕಳೆದ ಜನೆವರಿಯಲ್ಲಿ ನಡೆದಿದ್ದ ಗಲಾಟೆಯ ಹಳೇ ವೈಷಮ್ಯವೇ ಕಾರಣ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಕಂಡು ಬಂದಿದೆ. ಬೆಳಗಾವಿ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿಯ ಮಾದರಿಯಲ್ಲೇ ಪ್ರಫುಲ್ ಮೇಲೆ ದಾಳಿ ಆಗಿತ್ತು. ಇದರಲ್ಲಿ ಸುರೇಶ ಜಾಲಗಾರ ಆರೋಪಿಯಾಗಿದ್ದಾನೆ. ಹೀಗಾಗಿ ಇದೇ ದ್ವೇಷದ ಮೇಲೆ ನಿನ್ನೆ ಹೊಂಚು ಹಾಕಿ ಸುರೇಶ ಮೇಲೆ ದಾಳಿ ಮಾಡಿದ್ದಾರೆ ಎನ್ನಲಾಗಿದೆ.
ಇನ್ನು ಸಿಸಿ ಕ್ಯಾಮರಾ ದೃಶ್ಯಾವಗಳಿಗಳಲ್ಲಿ ಪ್ರಫುಲ್ ಜತೆಗೆ ಇನ್ನೋರ್ವನ ಕೈಯಲ್ಲೂ ಪಿಸ್ತೂಲ್ ಕಂಡು ಬಂದಿದೆ. ಹೀಗಾಗಿ, ಇವುಗಳ ಎಲ್ಲಿಂದ ಬಂದಿದ್ದವು. ಇವುಗಳಿಗೆ ಲೈಸೆನ್ಸ್ ಇದೆಯಾ? ಎಂಬುದರ ಆಯಾಮದಲ್ಲೂ ಸದ್ಯ ತನಿಖೆಯಾಗಬೇಕಿದೆ.
ಗಡಿಪಾರಿಗೆ ಕ್ರಮಆರೋಪಿಗಳ ಪತ್ತೆಗೆ ಎರಡು ತಂಡ ರಚಿಸಲಾಗಿದೆ. ದೂರುದಾರ ಜಾಲಗರ ಮೇಲೆ ಕೊಲೆ ಯತ್ನ ಸೇರಿ ಅನೇಕ ಕೇಸ್ ಇವೆ. ಆರೋಪಿ ಪ್ರಫುಲ್ ಮೇಲೂ ರಾಬರಿ, ಜೂಜಾಟದಂತಹ ಕೇಸ್‌ಗಳಿವೆ. ಇಬ್ಬರಿಗೂ ಹಳೇ ಅಪರಾಧ ಹಿನ್ನೆಲೆ ಇದೆ. ಇವರ ಪೂರ್ವಾಪರ ನೋಡಿಕೊಂಡು ಮುಂದೆ ಇಂತಹ ಘಟನೆ ಆಗದಂತೆ ಮುಂಜಾಗ್ರತೆ ವಹಿಸಲು ಗೂಂಡಾ ಕಾಯ್ದೆಯಡಿ ಗಡಿಪಾರು ಮಾಡಲು ಚಿಂತಿಸಲಾಗುತ್ತಿದೆ. ಇನ್ನು ಮುಂದೆ ಹೊರಗಡೆ ಇರಲು ಬಿಡುವುದಿಲ್ಲ. ಜೈಲಿಗೆ ಕಳುಹಿಸುತ್ತೇವೆ.
— -ಭೂಷಣ ಬೋರಸೆ, ಪೊಲೀಸ್ ಆಯುಕ್ತ