ಡೋನವಾಡ ಗ್ರಾಮದಲ್ಲಿ ಹಮ್ಮಿಕೊಂಡಿರುವ ವಚನ ದರ್ಶನ ಪ್ರವಚನ ಸಮಾರೋಪ ಸಮಾರಂಭದಲ್ಲಿ ಡಾ.ಪಂಚಮಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿದರು. ಸಂಪಾದನಾ ಸ್ವಾಮೀಜಿ, ಶಿವಪ್ರಸಾದ ದೇವರ ಇದ್ದರು 
ಬೆಳಗಾವಿ

ಗುರುವಿನ ಶಕ್ತಿ ಅಪಾರ

ಚಿಕ್ಕೋಡಿ: ಮನಸ್ಸು ಸ್ವಚ್ಛವಾಗಿರಿಸಲು ಗುರುವಿನ ಪಾಠ, ಪ್ರವಚನಗಳಿಂದ ಸಾಧ್ಯ ಎಂದು ನಿಡಸೋಸಿ ಸಿದ್ಧಸಂಸ್ಥಾನ ಮಠದ ಡಾ.ಪಂಚಮಶಿವಲಿಂಗೇಶ್ವರ ಸ್ವಾಮೀಜಿ ಹೇಳಿದರು.
ತಾಲೂಕಿನ ಡೋನವಾಡ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಚನ ಪ್ರವಚನ ದರ್ಶನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಗುರುವಿನ ಶಕ್ತಿ ಅಪಾರ ಎಂದರು. ಚಿಂಚಣಿ ಸಿದ್ದಸಂಸ್ಥಾನ ಮಠದ ಉತ್ತರಾಧಿಕಾರಿ ಶಿವಪ್ರಸಾದ ದೇವರು ಮಾತನಾಡಿ, ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ ಇಂದಲ್ಲ ನಾಳೆ ಫಲ ಕೊಟ್ಟೆ ಕೊಡುತ್ತದೆ ಎನ್ನುವಂತೆ, ಡೋನವಾಡ ಗ್ರಾಮದಲ್ಲಿ ಸಂಪಾದನಾ ಸ್ವಾಮೀಜಿ ಬಿತ್ತಿದ ಧರ್ಮ ಮತ್ತು ಭಕ್ತಿಯ ಬೀಜ ಹೆಮ್ಮರವಾಗಿ ಬೆಳೆಯುತ್ತಿದೆ ಎಂದರು.  
ಸಂಪಾದನಾ ಸ್ವಾಮೀಜಿ ಮಾತನಾಡಿದರು. ಬಳಿಕ ಭಕ್ತರಿಗೆ ಲಿಂಗದೀಕ್ಷೆ, ಮಕ್ಕಳಿಗೆ ರುದ್ರಾಕ್ಷಿ ಹಾಗೂ ವಿಭೂತಿ ವಿತರಿಸಲಾಯಿತು. ಚಿಕ್ಕೋಡಿ ವಕೀಲರ ಸಂಘದ ಅಧ್ಯಕ್ಷ ಕಲ್ಮೇಶ ಕಿವಡ, ವಕೀಲ ನಾಗೇಶ ಕಿವಡ, ಮಹಾದೇವ ಕಿವಡ, ಶಿವಲಿಂಗ ಯಾದಗೂಡೆ, ನಾಗಪ್ಪ ಮಗದುಮ್ಮ, ಮುತ್ತೆಪ್ಪ ಹಳಬರ, ಕಲ್ಲಪ್ಪ ಸೊಲ್ಲಾಪೂರೆ, ಕಲ್ಲಪ್ಪ ಕಿವಡ, ರೇವಯ್ಯ ಜಂಗಮ, ಅರ್ಜುನ ಕಿವಡ ಇತರರಿದ್ದರು. ಶಿಕ್ಷಕ ರಾಚಪ್ಪ ಮಗದುಮ್ಮ ಸ್ವಾಗತಿಸಿದರು.
.