ಅತಿಥಿ ಶಿಕ್ಷಕರ 
ಬೆಳಗಾವಿ

ಸರ್ಕಾರಿ ಶಾಲೆಗಳಿಗೆ ಅತಿಥಿ ಶಿಕ್ಷಕರೇ ಜೀವನಾಡಿ!

ಬೆಳಗಾವಿ:ಗ್ರಾಮೀಣ ಮತ್ತು ನಗರ ಪ್ರದೇಶಗಳ ಬಡ ಹಾಗೂ ಮಧ್ಯಮ ವರ್ಗದ ಮಕ್ಕಳ ಕನಸುಗಳಿಗೆ ‘ಗುರುಕುಲ’ ಕೇಂದ್ರಗಳಾಗಿರುವ ಸರ್ಕಾರಿ ಶಾಲೆಗಳಿಗೆ ಸರ್ಕಾರಿ ಶಾಲೆಗಳಿಗೆ ಅತಿಥಿ ಶಿಕ್ಷಕರೇ ಜೀವನಾಡಿ! ಮತ್ತೊಂದೆಡೆ ವರ್ಗಾವಣೆಗೊಂಡ, ನಿವೃತ್ತ ಹೊಂದಿರುವ ಶಿಕ್ಷಕರ ಖಾಲಿ ಸ್ಥಾನಗಳಿಗೆ ಭರ್ತಿ ನೆನಗುದಿಗೆ ಬಿದ್ದಿದೆ.
ಹೌದು. ಬೆಳಗಾವಿ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳಲ್ಲಿ ಸರ್ಕಾರಿ ಪ್ರಾಥಮಿಕ-3962 ಮತ್ತು ಪ್ರೌಢ -1,220 ಶಾಲೆಗಳಲ್ಲಿ ಕಾಯಂ ಶಿಕ್ಷಕರ ಕೊರತೆಯಿಂದಾಗಿ ಸರ್ಕಾರವು ಗೌರವಧನದ ಆಧಾರದ ಮೇಲೆ ಪ್ರತಿ ವರ್ಷ ಆಯಾ ಶಾಲೆಗೆ ಮಕ್ಕಳ ಹಾಜರಾತಿ, ಬೇಡಿಕೆಯ ಅನುಗುಣವಾಗಿ 3,200 ರಿಂದ 3,500ವರೆಗೆ ಅತಿಥಿ ಶಿಕ್ಷಕರನ್ನು ನಿಯೋಜನೆ ಮಾಡುತ್ತಿದೆ. ಆದರೆ, ಕಾಯಂ ಶಿಕ್ಷಕರ ನೇಮಕ ಮಾಡದಿರುವುದು ಮಕ್ಕಳ ಕಲಿಕೆಯ ಮೇಲೆ ಪರಿಣಾಮ ಬೀರುತ್ತಿದೆ. ಅಲ್ಲದೆ, ಬಹುತೇಕ ಪಾಲಕರು ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.
ಶಿಕ್ಷಣ ಇಲಾಖೆಯ ಮಾಹಿತಿ ಪ್ರಕಾರ ಎರಡು ವರ್ಷಗಳಿಂದ ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆಗಳಲ್ಲಿ 5,430ಕ್ಕೂ ಶಿಕ್ಷಕರ ಅಧಿಕ ಹುದ್ದೆಗಳು ಖಾಲಿ ಉಳಿದಿವೆ. ಈ ನಡುವೆ ಕೆಲ ಶಿಕ್ಷಕರು ನಿವೃತ್ತಗೊಂಡಿದ್ದರೆ ಇನ್ನೂ ಕೆಲವರು ಬೇರೆ ಬೇರೆ ಕಡೆ ವರ್ಗಾವಣೆಗೊಂಡಿದ್ದಾರೆ. ಹೀಗಾಗಿ 2026-27ನೇ ಶೈಕ್ಷಣಿಕ ಸಾಲಿನ ಆರಂಭದಲ್ಲಿಯೇ ಶಾಲೆಗಳು ಶಿಕ್ಷಕರ ಕೊರತೆ ಪ್ರವೇಶಾತಿಯ ಮೇಲೆ ಕರಿನೆರಗಳು ಬೀಳುವ ಸಾಧ್ಯತೆ ಹೆಚ್ಚಿದೆ.
ಬೆಳಗಾವಿ ಮಹಾನಗರ ಸೇರಿ ಖಾನಾಪುರ, ಅಥಣಿ, ಕಾಗವಾಡ, ಚಿಕ್ಕೋಡಿ, ರಾಯಬಾಗ, ಸವದತ್ತಿ, ಗೋಕಾಕ, ಮೂಡಲಗಿ, ರಾಮದುರ್ಗ, ಬೈಲಹೊಂಗಲ ತಾಲೂಕಿನ ತೋಟಪಟ್ಟಿಗಳು ಹಾಗ ಕಾಡಂಚಿನ ಗ್ರಾಮಗಳ ಶಾಲೆಗಳ ಮಕ್ಕಳು ಶಿಕ್ಷಕರ ಕೊರತೆಯಿಂದ ಹೆಚ್ಚಿನ ಸಮಸ್ಯೆ ಎದುರಿಸುತ್ತಿವೆ..ಈ ಭಾಗದ ಶಾಲೆಗಳಲ್ಲಿ ಒಬ್ಬೊಬ್ಬ ಶಿಕ್ಷಕರಿಗೆ ಹೆಚ್ಚುವರಿಯಾಗಿ 2 ರಿಂದ 3 ತರಗತಿಗಳ ಜವಾಬ್ದಾರಿ ನೀಡಲಾಗುತ್ತಿದೆ. ಇದು ಮಕ್ಕಳ ಗುಣಮಟ್ಟದ ಕಲಿಕೆಯ ಮೇಲೆ ಕೆಟ್ಟ ಪರಿಣಾಮ ಉಂಟು ಮಾಡಿದೆ. ಸುಮಾರು 800 ಪ್ರೌಢ ಶಾಲೆಗಳಲ್ಲಿ ವಿಷಯವಾರು ಕಾಯಂ ಶಿಕ್ಷಕರು ಇಲ್ಲ. ಇಂಗ್ಲೀಷ್, ವಿಜ್ಞಾನ ವಿಷಯ ಹೇಳುವ ಶಿಕ್ಷಕರು ಸಮಾಜ ವಿಜ್ಞಾನ, ಕನ್ನಡ, ಗಣಿತ ವಿಷಯಗಳನ್ನು ಹೇಳುವ ಸ್ಥಿತಿ ಇದೆ ಎಂದು ಎಸ್‌ಡಿಎಂಸಿ ಸದಸ್ಯರು, ಪಾಲಕರು ದೂರಿದ್ದಾರೆ.
ಪ್ರತಿ ವರ್ಷ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿಅತಿಥಿ ಶಿಕ್ಷಕರು ಮಾಸಿಕ ಗೌರವಧನದ ಆಧಾರದ ಮೇಲೆ ಮೇ ಮತ್ತು ಜೂನ್‌ನಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ನೇಮಕವಾದ ಅತಿಥಿ ಶಿಕ್ಷಕರಿಗೆ ಸರಿಯಾಗಿ ವೇತನ ಸಿಗುತ್ತಿಲ್ಲ. ಪ್ರತಿ ತಿಂಗಳು ವೇತನವಿಲ್ಲದೆ ಪರದಾಡಬೇಕು. ಆಯಾ ಶಾಲೆಯ ಮುಖ್ಯೋಪಾದ್ಯಾಯ, ಕ್ಷೇತ್ರ ಶಿಕ್ಷಣಾಧಿಕಾರಿಗಳು ವೇತನ ನೀಡಲು ಕಿರಿಕಿರಿ ಅನುಭವಿಸಬೇಕು. ಖಾಸಗಿ ಶಾಲೆಗಳಲ್ಲಿ ವೇತನ ಹೆಚ್ಚಳ ಜತೆಗೆ ಕಲಿಸಲು ಸ್ವತಂತ್ರ ಕಲ್ಪಿಸಿಕೊಡುತ್ತಾರೆ ಎಂದು ಅತಿಥಿ ಶಿಕ್ಷಕರು ತಿಳಿಸಿದ್ದಾರೆ.
.............................
ಬಾಕ್ಸ್
ಎರಡು ಶೈಕ್ಷಣಿಕ ಜಿಲ್ಲೆಯಲ್ಲಿ ಅತಿಥಿ ಶಿಕ್ಷಕರ ಬೇಡಿಕೆ ಅಂದಾಜು ವಿವರ
ವಿಭಾಗ ಬೆಳಗಾವಿ ಚಿಕ್ಕೋಡಿ
ಪ್ರಾಥಮಿಕ 1,600 1,500
ಪ್ರೌಢ ಶಾಲೆ 790 550
ಒಟ್ಟು 2,390 2,050
.....................
ಕೋಟ್ಸ್
ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆಗಳಲ್ಲಿ ವಿಷಯವಾರು ಶಿಕ್ಷಕರು ನೇಮಕಕ್ಕೆ ಕ್ರಮ ವಹಿಸಲಾಗುವುದು. ಶಾಲೆಗಳಲ್ಲಿ ಖಾಲಿ ಉಳಿದಿರುವ ಶಿಕ್ಷಕರ ಹುದ್ದೆಗಳ ಭರ್ತಿ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
--ಡಾ. ಈಶ್ವರ ಉಳ್ಳಾಗಡ್ಡಿ, ಆಯುಕ್ತ, ಶಿಕ್ಷಣ ಇಲಾಖೆ ಧಾರವಾಡ ವಿಭಾಗ
............