ಬೋರಗಾಂವದಲ್ಲಿರುವ ಅರಿಹಂತ ಉದ್ಯೋಗ ಸಹಕಾರ ಸಂಘಕ್ಕೆ ಸಹಕಾರ ಇಲಾಖೆ ಮುಖ್ಯ ನಿರ್ದೇಶಕ ಟಿ.ಎಚ್.ಎಂ.ಕುಮಾರ ಭೇಟಿ ನೀಡಿದರು. ಅಭಿನಂದನ ಪಾಟೀಲ, ಉತ್ತಮ ಪಾಟೀಲ, ಅಶೋಕ ಬಂಕಾಪುರೆ, ಆರ್.ಟಿ.ಚೌಗುಲಾ ಇತರರಿದ್ದರು.
ಬೋರಗಾಂವ: ಅರಿಹಂತ ಉದ್ಯೋಗ ಸಮೂಹ ಸಹಕಾರ ವಲಯದಲ್ಲಿ ಉತ್ತಮ ಕೊಡುಗೆ ನೀಡಿದೆ ಎಂದು ಸಹಕಾರ ಇಲಾಖೆ ಮುಖ್ಯ ನಿರ್ದೇಶಕ
ಪಟ್ಟಣದಲ್ಲಿರುವ ಅರಿಹಂತ ಉದ್ಯೋಗ ಸಮೂಹದ ಸಹಕಾರ ಸಂಘಗಳಿಗೆ ಭೇಟಿ ನೀಡಿ ಮಾತನಾಡಿದ ಅವರು, ಗ್ರಾಹಕರಿಗೆ ಸೌಜನ್ಯಯುತ ಸೇವೆ, ವಿವಿಧ ಸಾಲ ಯೋಜನೆಗಳು, ಠೇವಣಿ, ಲಾಕರ್ ಸೇರಿ ಇನ್ನಿತರ ಸೌಲಭ್ಯ ಒದಗಿಸಬೇಕು. ಸಹಕಾರ ಸಂಘದ ಉದ್ದೇಶ ಗಮನದಲ್ಲಿ ಇಟ್ಟುಕೊಂಡು ಸಂಸ್ಥೆ ಮುನ್ನಡೆಸಬೇಕು. ಆಡಳಿತ ಮಂಡಳಿ ನಿಸ್ವಾರ್ಥ ಸೇವೆಯಿಂದ ಸಹಕಾರ ಕ್ಷೇತ್ರ ಬೆಳೆಯಲು ಸಾಧ್ಯ ಎಂದರು.
ಸಹಕಾರ ಇಲಾಖೆ ಜಂಟಿ ನಿರ್ದೇಶಕ ಸುರೇಶ ಗೌಡ, ಉಪನಿರ್ದೇಶಕ ರವೀಂದ್ರ ಪಾಟೀಲ, ಸಹಾಯಕ ನಿರ್ದೇಶಕ ಬಾಹುಬಲಿ ಹಂಜೆ, ಅರಿಹಂತ ಸಂಸ್ಥೆ ಅಧ್ಯಕ್ಷ ಅಭಿನಂದನ ಪಾಟೀಲ, ಯುವ ಮುಖಂಡ ಉತ್ತಮ ಪಾಟೀಲ, ಸಂಸ್ಥೆ ಸಿಇಒ ಅಶೋಕ ಬಂಕಾಪುರೆ, ಕೃಷಿ ಸಂಘದ ಸಿಇಒ ಆರ್.ಟಿ.ಚೌಗಲೆ, ನಿರ್ದೇಶಕ ಸುಭಾಷ ಶೆಟ್ಟಿ, ಪೀರಗೌಡ ಪಾಟೀಲ, ಜೈಪಾಲ ಉಗಾರೆ, ಸಂದೀಪ ಪಾಟೀಲ, ಸುಮಿತ ರೊಡ್ದ, ಪ್ರದೀಪ ಮಾಳಿ, ದರ್ಶನ ಪಾಟೀಲ, ರಾಜು ಐದಮಾಳೆ, ರಾಜು ಗಜರೆ, ಅಭಿನಂದನ ಬೆನಾಡೆ, ಭರತ ಗುಂಡೆ, ರಾಕೇಶ ಫಿರಗಣ್ಣವರ ಇದ್ದರು.