ಬೋರಗಾಂವದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಶರದ ಜಂಗಟೆ ಮಾತನಾಡಿದರು. ಬಿ.ಕೆ.ಮಹಾಜನ, ಅಜಿತ್ ತೇರದಾಳೆ, ಜಿತೇಂದ್ರ ಪಾಟೀಲ ಇತರರಿದ್ದರು. 
ಬೆಳಗಾವಿ

ಬೋರಗಾಂವ ವೃತ್ತ ವಿಸ್ತರಣೆ ಕಾಮಗಾರಿಗೆ ಅನುದಾನ

ಪ್ರಶಾಂತ ಹೂಗಾರ
ಬೋರಗಾಂವ: ಶಾಸಕಿ ಶಶಿಕಲಾ ಜೊಲ್ಲೆ ಮತ್ತು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಅವರ ಪ್ರಯತ್ನದಿಂದ ಬೋರಗಾಂವ ವೃತ್ತದ ವಿಸ್ತರಣೆ ಮತ್ತು ಸೌಂದರ್ಯೀಕರಣಕ್ಕಾಗಿ 2 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಶೀಘ್ರ ಕಾಮಗಾರಿ ಉದ್ಘಾಟನೆ ನೆರವೇರಲಿದೆ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಶರದ ಜಂಗಟೆ ಹೇಳಿದರು.
ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವೃತ್ತ ವಿಸ್ತರಿಸುವಂತೆ ಆಚಾರ್ಯ 108 ಶ್ರೀ ಕುಲರತ್ನ ಭೂಷಣಮುನಿ ಮಹಾರಾಜರು ಶಾಸಕಿ ಶಶಿಕಲಾ ಅವರನ್ನು ವಿನಂತಿಸಿದ್ದರು. ಇದಕ್ಕೆ ಸ್ಪಂದಿಸಿದ ಶಾಸಕಿ ಜೊಲ್ಲೆ ಅನುದಾನ ಮಂಜೂರು ಮಾಡಿಸಿದ್ದಾರೆ. ಕಾಮಗಾರಿಯಲ್ಲಿ ವೃತ್ತ ವಿಸ್ತರಣೆ, ಪಾದಚಾರಿ ಮಾರ್ಗ ನಿರ್ಮಾಣ ಮತ್ತು ಬೀದಿದೀಪ ಅಳವಡಿಕೆ ಒಳಗೊಂಡಿದೆ.
ವೃತ್ತದಿಂದ ಮದರಸಾವರೆಗಿನ ಎರಡೂ ಬದಿ ಒಳಚರಂಡಿ ನಿರ್ಮಾಣಕ್ಕೆ 60 ಲಕ್ಷ ರೂ. ಮಂಜೂರಾಗಿದೆ. 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಪದವಿಪೂರ್ವ ಕಾಲೇಜು ಉದ್ಘಾಟನೆ, 15 ಲಕ್ಷ ರೂ. ವೆಚ್ಚದಲ್ಲಿ ಭುರ್ಕೆ ತೋಟದ ರಸ್ತೆ ನಿರ್ಮಾಣ ಮತ್ತು 32 ಲಕ್ಷ ರೂ. ವೆಚ್ಚದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ಮತ್ತು ನಮ್ಮ ಚಿಕಿತ್ಸಾಲಯ, ಖೋತ ವಸಾಹತು ರಸ್ತೆಗೆ 25 ಲಕ್ಷ ರೂ., ಶಾಂತಿನಗರದ ರಸ್ತೆಗೆ 25 ಲಕ್ಷ ರೂ., ಗೋಸಾವಿ ಮನೆಯಿಂದ ಕಮತ ವರೆಗಿನ ರಸ್ತೆಗೆ 45 ಲಕ್ಷ ರೂ. ಮಂಜೂರು ಆಗಿದೆ ಎಂದು ಮಾಹಿತಿ ನೀಡಿದರು.
ಗಾಪಂ ಮಾಜಿ ಅಧ್ಯಕ್ಷ ಬಿ.ಕೆ.ಮಹಾಜನ ಮಾತನಾಡಿ, ವಿರೋಧ ಪಕ್ಷದವರು ರಾಜಕೀಯ ಮಾಡದೆ ಅಭಿವೃದ್ಧಿ ಬಗ್ಗೆ ಮಾತನಾಡಬೇಕು. ನಾಗರಿಕರ ದಾರಿ ತಪ್ಪಿಸಬಾರದು ಎಂದು ಹೇಳಿದರು. ರಾಜಶೇಖರ ಹಿರೇಮಠ, ಅಜಿತ್ ತೇರದಾಳೆ, ಜಿತೇಂದ್ರ ಪಾಟೀಲ, ಅಜಿತ ಕಾಂಬಳೆ, ಬಂಡು ಮಾಳಿ, ಸಂಜಯ ಮಹಾಜನ, ಭರತ ಕಾಂಬಳೆ, ಶ್ರೀಪಾಲ ಗೋಸಾವಿ, ಶಂಕರ ಗುರವ, ಭರತ ಚೋಕವೆ, ಬಾಹುಬಲಿ ಚೋಕವೆ, ಕಿಶನ್ ಗೋಸಾವಿ, ಮಹಾದೇವ ಐದಮಾಳೆ, ಮಧುಮತಿ ಪಾಟೀಲ, ಸಚಿನ ಕೋಳಿ, ಋಷಿಕೇಶ ಗುರವ ಇದ್ದರು.