ಬೋರಗಾಂವ ಪಟ್ಟಣದಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳಕ್ಕೆ ಮೀನಾಕ್ಷಿ ಪಾಟೀಲ ಚಾಲನೆ ನೀಡಿದರು. ವಿನಯಶ್ರೀ ಪಾಟೀಲ, ಯುವರಾಜ ಪಾಟೀಲ ಇತರರಿದ್ದರು. 
ಬೆಳಗಾವಿ

ತಾಂತ್ರಿಕ ಶಿಕ್ಷಣದಿಂದ ಉತ್ತಮ ಅವಕಾಶ

ವಿದ್ಯಾ ಶೆಟ್ಟನಗೌಡ್ರ

ಪ್ರಮುಖ ಮುಖ್ಯಾಂಶಗಳು

  • ಮೀನಾಕ್ಷಿ ಪಾಟೀಲ ಅಭಿಪ್ರಾಯ
  • ಉದ್ಯೋಗ ಮೇಳ
ಬೋರಗಾಂವ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ, ಯುವಜನತೆ ಶಿಕ್ಷಣದೊಂದಿಗೆ ಕೌಶಲ ಮತ್ತು ಆಧುನಿಕ ತಾಂತ್ರಿಕ ಶಿಕ್ಷಣದತ್ತ ಗಮನಹರಿಸಿದರೆ, ಉತ್ತಮ ಅವಕಾಶ ಲಭ್ಯ ಎಂದು ಅರಿಹಂತ ಶಾಲಾ ನಿರ್ದೇಶಕಿ ಮೀನಾಕ್ಷಿ ಪಾಟೀಲ ಹೇಳಿದರು.
ಪಟ್ಟಣದಲ್ಲಿ ಅರಿಹಂತ ಗ್ರೂಪ್ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡಿ, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಕಳೆದ ಏಳು ವರ್ಷಗಳಿಂದ ಉದ್ಯೋಗ ಮೇಳ ಆಯೋಜಿಸಲಾಗುತ್ತಿದೆ. ಶಾಲಾ ಅಧ್ಯಕ್ಷ ಉತ್ತಮ ಪಾಟೀಲ, ಅರಿಹಂತ ಉದ್ಯೋಗ ಸಮೂಹದ ಕಾರ್ಯಾಧ್ಯಕ್ಷ ಅಭಿನಂದನ ಪಾಟೀಲ ವಿವಿಧ ಶಿಬಿರ ಮತ್ತು ಉದ್ಯೋಗ ಮೇಳಗಳಂತಹ ಕಾರ್ಯಕ್ರಮ ಕೈಗೊಳ್ಳುತ್ತಿದ್ದಾರೆ. ಅರಿಹಂತ ಗ್ರೂಪ್ ವತಿಯಿಂದ ಹಲವಾರು ಯುವಕರಿಗೆ ಉದ್ಯೋಗಾವಕಾಶ ನೀಡಲಾಗಿದ್ದು, ಇದರ ಲಾಭ ಪಡೆಯಬೇಕು ಎಂದರು.
ಶಾಲಾ ಉಪಾಧ್ಯಕ್ಷ ಅಭಯ ಕರೋಲೆ, ನಿರ್ದೇಶಕಿ ವಿನಯಶ್ರೀ ಪಾಟೀಲ, ಯುವರಾಜ ಪಾಟೀಲ, ಅರಿಹಂತ ಸಂಸ್ಥೆ ಸಿಇಒ ಅಶೋಕ ಬಂಕಾಪುರೆ, ಮಹಾದೇವ ಉಲಪೆ, ಅಣ್ಣಾಸಾಹೇಬ ಭೋಜಕರ, ಕೃಷಿ ಸಂಘದ ಸಿಇಒ ಆರ್.ಟಿ. ಚೌಗುಲಾ, ಶಿಕ್ಷಣ ಸಂಸ್ಥೆ ಸಿಇಒ ಬಾಳಾಸಾಹೇಬ ಹಾವಲೆ, ಐಟಿಐ ಪ್ರಾಂಶುಪಾಲ ವಿ.ಬಿ.ಶಿರಹಟ್ಟಿ, ವಿಕ್ರಂ ಘಾಟಗೆ ಇತರರಿದ್ದರು.