ಶೇಗುಣಸಿ ಗ್ರಾಮದಲ್ಲಿ ಕೃಷಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ರೈತ ತರಬೇತಿ ಕಾರ್ಯಕ್ರಮದಲ್ಲಿ ಶಂಕರ ಹಳದಮಳ, ಉಮೇಶ ಹಾವರೆಡ್ಡಿ, ಶಂಕರ ಹಳದಮಳ, ಉಮೇಶ ಹಾವರೆಡ್ಡಿ, ಕಲ್ಲಪ್ಪ ಮಾಳಿ, ಅನಿತಾ ಅಂಬಿ ಇತರರಿದ್ದರು. 
ಬೆಳಗಾವಿ

ದ್ವಿದಳ ಧಾನ್ಯದಿಂದ ಉತ್ತಮ ಆದಾಯ

ಪ್ರಶಾಂತ ಹೂಗಾರ

ಅಥಣಿ ಗ್ರಾಮೀಣ: ರೈತರು ಕೃಷಿ ಇಲಾಖೆ ಸಲಹೆ ಪಡೆದು ವೈಜ್ಞಾನಿಕ ಪದ್ಧತಿಯಲ್ಲಿ ಬೆಳೆ ನಿರ್ವಹಣೆ ಮಾಡಬೇಕು ಎಂದು ಅಥಣಿ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಶಂಕರ ಹಳದಮಳ ಹೇಳಿದರು.

ಅಥಣಿ ತಾಲೂಕಿನ ಶೇಗುಣಸಿ ಗ್ರಾಮದಲ್ಲಿ ಕೃಷಿ ಇಲಾಖೆ ವತಿಯಿಂದ ದ್ವಿದಳ ಧಾನ್ಯ ಆತ್ಮನಿರ್ಭರತಾ ಅಭಿಯಾನದಡಿ ಕಬ್ಬುಬೆಳೆ ಬಾಧಿಸುವ ಗೊಣ್ಣೆಹುಳು ನಿಯಂತ್ರಣ ಕುರಿತು ಗುರುವಾರ ಹಮ್ಮಿಕೊಂಡಿದ್ದ ರೈತ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶಾದ್ಯಂತ ದ್ವಿದಳ ಧಾನ್ಯಗಳ ಬೇಡಿಕೆ ಹೆಚ್ಚುತ್ತಿದೆ. ಆಮದು ಅವಲಂಬನೆ ತಪ್ಪಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಆತ್ಮನಿರ್ಭರತಾ ಅಭಿಯಾನ ಜಾರಿಗೆ ತಂದಿದೆ. ಉದ್ದು, ತೊಗರಿ, ಹೆಸರು ಸೇರಿದಂತೆ ದ್ವಿದಳ ಧಾನ್ಯಗಳ ಬೆಳೆ ವಿಸ್ತೀರ್ಣದಿಂದ ಮಣ್ಣಿನ ಫಲವತ್ತತೆ ಹೆಚ್ಚುವುದರ ಜತೆಗೆ ರೈತರಿಗೆ ಉತ್ತಮ ಆದಾಯ ದೊರೆಯಲಿದೆ ಎಂದು ತಿಳಿಸಿದರು.

ಕೃಷಿ ಅಧಿಕಾರಿ ಉಮೇಶ ಹಾವರೆಡ್ಡಿ ಮಾತನಾಡಿ, ಕಬ್ಬಿನ ಬೆಳೆಯಲ್ಲಿ ಕಾಣಿಸಿಕೊಳ್ಳುವ ಗೊಣ್ಣೆ ಹುಳ ಬಾಧೆ, ಅದರ ಹಾನಿಯ ಲಕ್ಷಣಗಳು ಹಾಗೂ ನಿಯಂತ್ರಣ ಕ್ರಮಗಳ ಕುರಿತು ರೈತರಿಗೆ ಪ್ರಾತ್ಯಕ್ಷಿಕೆ ಮೂಲಕ ತಿಳಿಸಿದರು. ಕಲ್ಲಪ್ಪ ಮಾಳಿ, ಕಲ್ಮೇಶ ಯಲಡಗಿ, ಬುಜಪ್ಪ ಹಳ್ಳೂರ, ಸಚಿನ ಪುಟ್ಟಗೌಡರ, ಮಹಾಂತೇಶ ಯಲಡಗಿ, ಮಹಾವೀರ ಹಳಿಂಗಳಿ, ಸಂಜು ಅಂಬಿ, ಅಣ್ಣಪ್ಪ ಗಸ್ತಿ, ಅನಿತಾ ಅಂಬಿ, ಗಂಗಾಧರ ಅವಕನವರ ಇತರರಿದ್ದರು.