ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ ಕಾರ್ಯಕ್ರಮದಲ್ಲಿ ಡಾ.ವಿ.ಐ.ಪಾಟೀಲ ಮಾತನಾಡಿದರು. ಚಂದ್ರಶೇಖರ ಕಾರಿಮನಿ, ನಿಂಗಪ್ಪ ಕರಿಕಟ್ಟಿ ಇತರರಿದ್ದರು.
ಗ್ರಾಮದ ವೀರರಾಣಿ ಮಲ್ಲಮ್ಮ ಸ್ಮಾರಕ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಾಸ್ತಾವಿಕ ಮಾತನಾಡಿದ ಗ್ರಾಪಂ ಅಧ್ಯಕ್ಷ ಚಂದ್ರಶೇಖರ ಕಾರಿಮನಿ, ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ಕ್ರೀಡಾಕೂಟ ಒಳ್ಳೆಯ ವೇದಿಕೆಯಾಗಿದೆ. ವಿದ್ಯಾರ್ಥಿಗಳು ಅವಕಾಶ ಸದ್ಬಳಕೆ ಮಾಡಿಕೊಳ್ಳಬೇಕೆಂದರು. ವಿದ್ಯಾರ್ಥಿಗಳ ಪಥಸಂಚನ ಗಮನ ಸೆಳೆಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಗಣ್ಯರು ಬಹುಮಾನ ವಿತರಿಸಿದರು.
ಸಂಸ್ಥೆ ನಿರ್ದೇಶಕ ನಿಂಗಪ್ಪ ಕರಿಕಟ್ಟಿ, ಕಾರ್ಯದರ್ಶಿ ಎಂ.ಎಂ.ಕಾಡೇಶನವರ, ಜಿಪಂ ಮಾಜಿ ಸದಸ್ಯ ಈರಣ್ಣ ಕರಿಕಟ್ಟಿ, ಕೆ.ಎಸ್.ಕಾಂಬ್ಳೆ, ಮಡಿವಾಳಯ್ಯ ರೊಟ್ಟಯ್ಯನವರ, ಡಾ.ಎ.ಬಿ.ಪಾಟೀಲ, ಬಿ.ಸಿ.ಬಳಿಗೇರ, ಬಸಯ್ಯ ಭೋಜಯ್ಯನವರ, ಶಶಿಧರ ಪತ್ತಾರ, ಪ್ರಕಾಶ ಬಳಿಗಾರ, ಆಶೋಕ ಮಾರಿಹಾಳ, ಎನ್.ಸಿ.ಯರಗಂಬಳಿಮಠ, ಸುನೀತಾ ಯಮಕನಮರಡಿ ಇತರರಿದ್ದರು. ಪ್ರಾಚಾರ್ಯ ಮಹಾಂತೇಶ ಉಪ್ಪಿನ ನಿರೂಪಿಸಿದರು. ಶಿಕ್ಷಕ ಶಂಕರ ಕರಿಕಟ್ಟಿ ವಂದಿಸಿದರು.