ಪರಿಸರ ಸ್ನೇಹಿ ಗಣೇಶ ಮೂರ್ತಿಗೆ ಆದ್ಯತೆ ನೀಡಲು ಆಗ್ರಹಿಸಿ ಬುಧವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಪಾಂಡುರಂಗ ಧೋತ್ರೆ, ಡಾ.ಸುಭಾಸ ಪಾಟೀಲ, ದುರ್ಗೇಶ ಹರಿತಾಯ್, ಮಹಾಂತೇಶ ಪುರಾಣಿಕ, ಸೋಮಶೇಖರ ಸುತಾರ ಇತರರಿದ್ದರು. 
ಬೆಳಗಾವಿ

ಪರಿಸರ ಸ್ನೇಹಿ ಗಣೇಶ ಮೂರ್ತಿಗೆ ಆದ್ಯತೆ ನೀಡಿ

ಬೆಳಗಾವಿ : ಗಣೇಶೋತ್ಸವದಲ್ಲಿ ಪರಿಸರಕ್ಕೆ ಹಾನಿಯಾಗುವ ಪಿಒಪಿ ಮೂರ್ತಿಗಳ ಬಳಕೆ ನಿರ್ಬಂಧಿಸಿ, ಪರಿಸರ ಸ್ನೇಹಿ ಮಣ್ಣಿನ ಗಣಪತಿ ಮೂರ್ತಿ ಬಳಕೆಗೆ ಜಿಲ್ಲಾಡಳಿತ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು ಎಂದು ರೋಟರಿ ಕ್ಲಬ್ ಬೆಳಗಾವಿ ಉತ್ತರ ವಲಯ ಆಗ್ರಹಿಸಿದೆ.
ಈ ಸಂಬಂಧ ಕ್ಲಬ್ ಸದಸ್ಯರು ಬುಧವಾರ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್‌ಗೆ ಮನವಿ ಸಲ್ಲಿಸಿದ್ದಾರೆ. ಪಿಒಪಿ ಮೂರ್ತಿ ನೀರಿನಲ್ಲಿ ಕರಗದೆ ಜಲಮೂಲಗಳನ್ನು ಕಲುಷಿತಗೊಳಿಸುತ್ತಿವೆ. ರಾಸಾಯನಿಕ ಬಣ್ಣಗಳಿಂದ ಜಲಚರ ಮತ್ತು ಪರಿಸರಕ್ಕೂ ಹಾನಿ. ಆದರೆ, ನೈಸರ್ಗಿಕವಾಗಿ ಮಣ್ಣಿನಿಂದ ತಯಾರಿಸಿದ ಮೂರ್ತಿಗಳು ನೀರಿನಲ್ಲಿ ಸುಲಭವಾಗಿ ಕರಗುತ್ತವೆ. ಆದ್ದರಿಂದ ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.
ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಉತ್ಸವಕ್ಕೆ ಪ್ರೋತ್ಸಾಹ ನೀಡುವುದಕ್ಕಾಗಿ ಕಳೆದ ಏಳು ವರ್ಷಗಳಿಂದ ರೋಟರಿ ಕ್ಲಬ್ ಜಾಗೃತಿಯ ಜತೆಗೆ ಮಣ್ಣಿನ ಗಣಪತಿ ಮೂರ್ತಿಗಳನ್ನು ನಾವೇ ವಿವಿಧೆಡೆಗಳಿಗೆ ಜನರಿಗೆ ತಲುಪಿಸುತ್ತಿದ್ದೇವೆ. ಇದೇ ರೀತಿ ಎಲ್ಲ ಕಡೆ ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗಾಗಿ ಸಾರ್ವಜನಿಕರು, ಶಿಕ್ಷಣ ಸಂಸ್ಥೆಗಳು, ಗಣೇಶ ಮಂಡಳಿ ಹಾಗೂ ಮೂರ್ತಿ ತಯಾರಕರಲ್ಲಿ ಜಿಲ್ಲಾಡಳಿತ ಹೆಚ್ಚಿನ ಅರಿವು ಮೂಡಿಸಬೇಕು ಒತ್ತಾಯಿಸಿದರು.
ಪಾಂಡುರಂಗ ಧೋತ್ರೆ, ಡಾ.ಸುಭಾಸ ಪಾಟೀಲ, ದುರ್ಗೇಶ ಹರಿತಾಯ್, ಮಹಾಂತೇಶ ಪುರಾಣಿಕ, ಸೋಮಶೇಖರ ಸುತಾರ, ವಿಕ್ಕಿ ಸಿಂಗ್, ಮಂಗೇಶ ಕಂಟಕ್ ಇತರರಿದ್ದರು.