ಧಡೇರಕೊಪ್ಪದಲ್ಲಿ ಹಮ್ಮಿಕೊಂಡಿದ್ದ ರೇಣುಕಾ ದೇವಿ ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಅಭಿನವ ನಾಗಲಿಂಗ ಸ್ವಾಮೀಜಿ ಉದ್ಘಾಟಿಸಿದರು. ಗೋವಿಂದಗೌಡ ತಿಪರಾಶಿ, ರೇವಣಸಿದ್ದಪ್ಪ ನಂದೆನ್ನವರ, ಮಾರುತಿ ಶಿಂಧೆ, ಬಿ.ಕೆ.ಹೊಂಗಲ, ಲಕ್ಷ್ಮೀ ಶಿಂಧೆ, ಪರಮೇಶ್ವರ ನಾಗನೂರ ಇತರರಿದ್ದರು. 
ಬೆಳಗಾವಿ

ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ

ಉಗರಗೋಳ: ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಮಕ್ಕಳನ್ನೇ ಆಸ್ತಿಯನ್ನಾಗಿ ರೂಪಿಸಬೇಕು ಎಂದು ಚಿಕ್ಕುಂಬಿಯ ಅಜಾತ ನಾಗಲಿಂಗಮಠದ ಅಭಿನವ ನಾಗಲಿಂಗ ಸ್ವಾಮೀಜಿ ಹೇಳಿದರು.
ಸವದತ್ತಿ ತಾಲೂಕಿನ ಧಡೇರಕೊಪ್ಪದಲ್ಲಿ ಹಮ್ಮಿಕೊಂಡಿದ್ದ ರೇಣುಕಾ ದೇವಿ ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮಾತನಾಡಿ, ಮಹಾನಗರದಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳು ಶಿಕ್ಷಣ ದಾಸೋಹ ಮಾಡುತ್ತಿವೆ. ಆದರೆ, ದಢೇರಕೊಪ್ಪದಂತಹ ಗ್ರಾಮೀಣ ಭಾಗದಲ್ಲಿ ಬಡ ಜನರಿಗೆ ಕೈಗೆಟುಕುವ ಶುಲ್ಕದಲ್ಲಿ ಶಿಕ್ಷಣ ನೀಡುತ್ತಿರುವ ಶಾಲೆ ಕಾರ್ಯ ಶ್ಲಾಘನೀಯ ಎಂದರು.
ರೇಣುಕಾ ಯಲ್ಲಮ್ಮ ದೇವಿ ಅರ್ಚಕರ ಸಂಘದ ಗೌರವಾಧ್ಯಕ್ಷ ಗೋವಿಂದಗೌಡ ತಿಪರಾಶಿ ಮಾತನಾಡಿ, ಮಕ್ಕಳಿಗೆ ಬಾಲ್ಯದಿಂದಲೇ ಸಂಸ್ಕಾರ ಕಲಿಸಬೇಕು ಎಂದರು. ರೇವಣಸಿದ್ದಪ್ಪ ನಂದೆನ್ನವರ, ಮಾರುತಿ ಶಿಂಧೆ, ಬಿ.ಕೆ.ಹೊಂಗಲ, ಲಕ್ಷ್ಮೀ ಶಿಂಧೆ, ಪರಮೇಶ್ವರ ನಾಗನೂರ, ವೀರೇಶ ನವಲಗುಂದ, ಮಹಾದೇವಪ್ಪ ಸನದಿ, ಸುಭಾಸಚಂದ್ರ ಶಿಂಧೆ, ತುಳಸಪ್ಪ ಅಜ್ಜನ್ನವರ, ಹೊನ್ನಪ್ಪ ಹೊನಮೀಶಿ, ಶಿವಾನಂದ ಹೊರಕೇರಿ, ಶಂಕ್ರಪ್ಪ ಬೆಳವಣಕಿ ಇತರರಿದ್ದರು.