ಹಂದಿಗುಂದ ಮಲ್ಲಿಕಾರ್ಜುನ ವಿವಿಧೋದ್ದೇಶ ಪಿಕೆಪಿಎಸ್ ಸಂಘದ ಕಾರ್ಯಾಲಯದಲ್ಲಿ ಪ್ರತಾಪರಾವ ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಗಿರಿಮಲ್ಲಪ್ಪ ಸುಳ್ಳನವರ, ಧರೆಪ್ಪ ಚಿನಗುಂಡಿ, ಪರಪ್ಪ ಬುದ್ನಿ ಇತರರಿದ್ದರು.
ಹಂದಿಗುಂದ: ಬಿಡಿಸಿಸಿ ಬ್ಯಾಂಕ್ ರೈತರ ಪ್ರತಿ ಎಕರೆ ಭೂಮಿಗೆ ೪ ಲಕ್ಷ ರೂ. ಸಾಲ ನೀಡಬೇಕು ಎಂದು ಜೆಡಿಎಸ್ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಪ್ರತಾಪರಾವ ಪಾಟೀಲ ಆಗ್ರಹಿಸಿದರು.
ಗ್ರಾಮದ ಮಲ್ಲಿಕಾರ್ಜುನ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದಲ್ಲಿ ಗುರುವಾರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಡಿಸಿಸಿ ಬ್ಯಾಂಕ್ ಸದ್ಯ ಪ್ರತಿ ಎಕರೆಗೆ ೪೦ ಸಾವಿರ ರೂ. ಸಾಲ ನೀಡುತ್ತಿದೆ. ಇದರಿಂದ ರೈತರು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತಿಲ್ಲ ಎಂದರು.
ಸಂಘದ ಅಧ್ಯಕ್ಷ ಶಿವಪ್ಪ ಮಿರ್ಜಿ, ಉಪಾಧ್ಯಕ್ಷ ಗಿರಿಮಲ್ಲಪ್ಪ ಸುಳ್ಳನವರ, ನಿರ್ದೇಶಕರಾದ ಧರೆಪ್ಪ ಚಿನಗುಂಡಿ, ಪರಪ್ಪ ಬುದ್ನಿ, ಮಲ್ಲಪ್ಪ ಮಿರ್ಜಿ, ರಮೇಶ ತೇಲಿ, ಮಲ್ಲಪ್ಪ ಇಟ್ನಾಳ, ಶ್ರೀಶೈಲ ಗೋಲಬಾವಿ, ಗಿರಿಮಲ್ಲಪ್ಪ ಚಿನಗುಂಡಿ, ಪರಪ್ಪ ಚಿಂಚಲಿ, ಚಂದ್ರಪ್ಪ ದೇವರವರ, ಗ್ರಾಪಂ ಉಪಾಧ್ಯಕ್ಷ ಸಂಗಪ್ಪ ಮಿರ್ಜಿ, ಗೌಡಪ್ಪ ಮಿರ್ಜಿ, ಮುರುಗೇಶ ರೆಡ್ಡಿ, ಮುರಿಗೆಪ್ಪ ಅಂದಾನಿ, ಶಿವಲಿಂಗಪ್ಪ ಸಂಕ್ರಟ್ಟಿ, ಬಸವರಾಜ ಮಿರ್ಜಿ, ಶ್ರೀಶೈಲ ಮೈಗೂರ, ವಿಠ್ಠಲ ಚಿನಗುಂಡಿ, ಸದಾಶಿವ ಸುಳ್ಳನವರ, ಪರಶುರಾಮ ಚಿನಗುಂಡಿ, ಸಿದ್ದಪ್ಪ ಉಳ್ಳಾಗಡ್ಡಿ, ರಮೇಶ ಉಳ್ಳಾಗಡ್ಡಿ, ಪರಪ್ಪ ಸುಳ್ಳನ್ನವರ, ಅಮಿತ ತೇಲಿ ಇತರರಿದ್ದರು.