ಬೆಂಗಳೂರಿನಲ್ಲಿ ಈಚೆಗೆ ಜಿಐಟಿ ನೀಡಲಾದ ಪ್ರಶಸ್ತಿಯನ್ನು ಎಫ್.ಆರ್.ಸಿಂಗ್ವಿಯಿಂದ ಡಾ.ವಿಜಯ ಅಥವಲೆ ಸ್ವೀಕರಿಸಿದರು. ಡಾ.ಅಜಯ ಸಿಂಗ್ ಇತರರಿದ್ದರು. 
ಬೆಳಗಾವಿ

ಜಿಐಟಿಗೆ ಅತ್ಯುತ್ತಮ ಕೌಶಲಾಭಿವೃದ್ಧಿ ಪ್ರಶಸ್ತಿ

ಡಿ.ವಿ. ಕಮ್ಮಾರ

ಬೆಳಗಾವಿ: ಬೆಂಗಳೂರಿನಲ್ಲಿ ೆಡರೇಷನ್ ಆ್ ಕರ್ನಾಟಕ ಚೇಂಬರ್ ಆ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ(ಎ್ಕೆಸಿಸಿಐ)ಯಿಂದ ಏರ್ಪಡಿಸಿದ್ದ ಉದ್ಯಮ ಸಂಸ್ಥೆ ನಾಯಕರ ಸಮಾಗಮದಲ್ಲಿ ಬೆಳಗಾವಿಯ ಕರ್ನಾಟಕ ಲಾ ಸೊಸೈಟಿಯ ಗೋಗಟೆ ತಾಂತ್ರಿಕ ಸಂಸ್ಥೆ (ಜಿಐಟಿ) ಎಕ್ಸಲೆನ್ಸ್ ಇನ್ ಸ್ಕಿಲ್ ಡೆವಲಪಮೆಂಟ್ ಪ್ರಶಸ್ತಿ ಪಡೆದುಕೊಂಡಿದೆ.

ಸನ್‌ಸೆರಾ ಇಂಜಿನಿಯರಿಂಗ್ ಲಿಮಿಟೆಡ್ ಜಂಟಿ ವ್ಯವಸ್ಥಾಪಕ ನಿರ್ದೇಶಕ ಎ್.ಆರ್.ಸಿಂಗ್ವಿ ಪ್ರದಾನ ಮಾಡಿದ ಪ್ರಶಸ್ತಿಯನ್ನು ಜಿಐಟಿ ಪ್ರಾಂಶುಪಾಲ ಡಾ. ವಿಜಯ ಅಥವಲೆ ಸ್ವೀಕರಿಸಿದರು. ಈ ವೇಳೆ ಸಚಿವರಾದ ಡಾ.ಶರಣ ಪ್ರಕಾಶ ಪಾಟೀಲ, ಡಾ.ಅಜಯ್ ಸಿಂಗ್, ಕರ್ನಾಟಕ ಕೌಶಲಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ.ಇ.ವಿ.ರಾಮಣ ರೆಡ್ಡಿ ಇತರರಿದ್ದರು.
ಸಮಾರಂಭದಲ್ಲಿ ಕೈಗಾರಿಕಾ ನಾಯಕರು, ಉನ್ನತ ಶಿಕ್ಷಣ ಸಂಸ್ಥೆಗಳು, ನೀತಿ ರೂಪಿಸುವವರು, ಸೆಕ್ಟರ್ ಸ್ಕಿಲ್ ಕೌನ್ಸಿಲ್‌ಗಳು, ಕಾನ್ಸುಲೇಟ್‌ಗಳು, ವಾಣಿಜ್ಯ ಪ್ರತಿನಿಧಿಗಳು ಹಾಗೂ ಜಾಗತಿಕ ವಾಣಿಜ್ಯ ಮಂಡಳಿಗಳವರು ರಾೃಪಾಲ್ಗೊಂಡು, ಕೌಶಲಾಭಿವೃದ್ಧಿ, ಉದ್ಯೋಗಾರ್ಹತೆ ಮತ್ತು ಕಾರ್ಮಿಕ ಪರಿವರ್ತನೆ ಕುರಿತು ಚರ್ಚೆ ನಡೆಸಿದರು.