ಬೆಳಗಾವಿ ನಗರದ ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ವಿಶ್ವ ಆರೋಗ್ಯ ದಿನ ಕಾರ್ಯಕ್ರಮವನ್ನು ಕರ್ನಲ್ ಡಾ.ಎಂ.ದಯಾನಂದ ಉದ್ಘಾಟಿಸಿದರು. ಡಾ.ಎಂ.ವಿ.ಜಾಲಿ, ಡಾ.ಮಾಧವ ಪ್ರಭು, ಎನ್.ಲೋಕೇಶ, ಡಾ.ಆರ್.ಎಸ್.ಮುಧೋಳ ಇತರರಿದ್ದರು. 
ಬೆಳಗಾವಿ

ಗುಣಮಟ್ಟದ ಆರೋಗ್ಯ ಸೇವೆ ಸಿಗಲಿ

ನಗರದ ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ವಿಶ್ವ ಆರೋಗ್ಯ ದಿನದ ಅಂಗವಾಗಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಶೇ.60ರಷ್ಟು ನುರಿತ ಆರೋಗ್ಯ ಸಿಬ್ಬಂದಿ ಮೆಟ್ರೋ ಮತ್ತು ಎರಡನೇ ಹಂತದ ನಗರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಹಳ್ಳಿಗಳಲ್ಲಿ ಶೇ.60ರಷ್ಟು ಜನರಿಗೆ ಆರೋಗ್ಯ ಸೇವೆ ಸಿಗುತ್ತಿಲ್ಲ. ಇಂತಹ ಸಮಸ್ಯೆ
ಕಾಹೆರ್ ಫೆರಿಪೆರಲ್ ಆಸ್ಪತ್ರೆ ಮುಖ್ಯ ವೈದ್ಯಕೀಯ ಸಲಹೆಗಾರ ಡಾ.ಎಂ.ವಿ.ಜಾಲಿ ಮಾತನಾಡಿ, ವಿಜ್ಞಾನದ ಆವಿಷ್ಕಾರ ಬಳಸಿ ಹಳ್ಳಿ ಮತ್ತು ನಗರಗಳ ನಡುವಿನ ಆರೋಗ್ಯ ಸೇವೆ ಕಂದಕ ಕಡಿಮೆ ಮಾಡುವುದು ಆಸ್ಪತ್ರೆಯ ಮೂಲ ಉದ್ದೇಶವಾಗಿದೆ ಎಂದರು.
ಡಾ.ಆರ್.ಎಸ್.ಮುಧೋಳ, ಆಡಳಿತಾಧಿಕಾರಿಗಳಾದ ಡಾ.ಬಸವರಾಜ ಬಿಜ್ಜರಗಿ, ಡಾ.ರಾಜಶೇಖರ ಸೋಮನಟ್ಟಿ, ಡಾ.ಸಮೀರ್ ಚಾಟೆ, ಕ್ಯಾನ್ಸರ್ ಆಸ್ಪತ್ರೆ ಸಿಒಒ ಪ್ರಶಾಂತ ದೇಸಾಯಿ, ನರ್ಸಿಂಗ್ ಅಧೀಕ್ಷಕಿ ಶ್ರೇಯಾ ಹಿರೇಕರ ಇತರರಿದ್ದರು.