ಪ್ರದ್ಮಶ್ರೀ ಪುರಸ್ಕೃತೆ ಸುನೀತಾ ಕೃಷ್ಣನ್ ಕಳವಳ ಕಾಯಕಶ್ರೀ ಪ್ರಶಸ್ತಿ ಪ್ರದಾನ ಗೋಕಾಕನಲ್ಲಿ ಹಮ್ಮಿಕೊಂಡಿದ್ದ 21ನೇ ಶರಣ ಸಂಸ್ಕೃತಿ ಉತ್ಸವದಲ್ಲಿ ಸುನೀತಾ ಕೃಷ್ಣನ್ ಅವರಿಗೆ ‘ಕಾಯಕಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬಸವ ಸ್ವಾಮೀಜಿ, ಮುರುಘರಾಜೇಂದ್ರ ಸ್ವಾಮೀಜಿ ಇತರರಿದ್ದರು. 
ಬೆಳಗಾವಿ

ಲಿಂಗ ಅಸಮಾನತೆ ದುಃಖದ ಸಂಗತಿ

ಗೋಕಾಕ: ಲಿಂಗ ಸಮಾನತೆಗಾಗಿ 12ನೇ ಶತಮಾನದಲ್ಲಿ ಬಸವಣ್ಣನವರು ಸೇರಿ ಅನೇಕ ದಾರ್ಶನಿಕರು ಶ್ರಮಿಸಿದ್ದರು. ಆದರೆ, ಇಂದಿಗೂ ಲಿಂಗ ಅಸಮಾನತೆ ಜೀವಂತವಿರುವುದು ಖೇದಕರ ಸಂಗತಿ ಎಂದು ಪ್ರದ್ಮಶ್ರೀ ಪುರಸ್ಕೃತರಾದ ಸುನೀತಾ ಕೃಷ್ಣನ್ ಹೇಳಿದರು.
ನಗರದ ಶ್ರೀ ಚನ್ನಬಸವೇಶ್ವರ ವಿದ್ಯಾಪೀಠದ ಆವರಣದಲ್ಲಿ ಶೂನ್ಯ ಸಂಪಾದನ ಮಠದ ಲಿಂ.ಬಸವ ಸ್ವಾಮೀಜಿ 21ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ 21ನೇ ಶರಣ
ಸಂಸ್ಕೃತಿ ಉತ್ಸವದಲ್ಲಿ ಅವರು ‘ಕಾಯಕಶ್ರೀ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಕಳೆದ 35 ವರ್ಷಗಳಿಂದ ಹೋರಾಟ ಮಾಡಿ ಸುಮಾರು 30 ಸಾವಿರಕ್ಕೂ ಅಧಿಕ ಹೆಣ್ಣುಮಕ್ಕಳನ್ನು ವೇಶ್ಯಾವಾಟಿಕೆಯಿಂದ ರಕ್ಷಿಸಿ, ಅವರಿಗೆ ಸ್ವಯಂ ಉದ್ಯೋಗ ಒದಗಿಸಿರುವ ತೃಪ್ತಿ ನನಗಿದೆ. ಹೆಣ್ಣುಮಕ್ಕಳಿಗೆ ಬುದ್ಧಿ ಹೇಳುವ ಮೊದಲು ಗಂಡುಮಕ್ಕಳಿಗೆ ಒಳ್ಳೆಯ ಸಂಸ್ಕೃತಿ ನೀಡಬೇಕು. ಶೋಷಣೆಗೆ ಒಳಗಾದವರಿಗೆ ಸಹಾಯ ಮಾಡುವ ಬದಲು ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕಿದೆ ಎಂದರು.
ಬಸವಬೆಳವಿಯ ಚರಂತೇಶ್ವರಮಠದ ಬಸವ ಸ್ವಾಮೀಜಿ ಮಾತನಾಡಿ, ಇತಿಹಾಸ ಓದಿದರೆ ಮಾತ್ರ ಇತಿಹಾಸ ಸೃಷ್ಟಿಸಲು ಸಾಧ್ಯವಾಗುತ್ತದೆ ಎಂದರು.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್ ಜ್ಯೋತಿ ಪಾಟೀಲ, ಬೆಳಗಾವಿಯ ಪ್ರಾದೇಶಿಕ ಆಯುಕ್ತೆ ಕೆ.ಎಂ.ಜಾನಕಿ, ಬಸವಧರ್ಮ ಪೀಠ ಕೂಡಲಸಂಗಮದ ಗಂಗಾ ಮಾತಾಜಿ, ಮುರುಘರಾಜೇಂದ್ರ ಸ್ವಾಮೀಜಿ, ಮುಖಂಡ ಸರ್ವೋತ್ತಮ ಜಾರಕಿಹೊಳಿ, ಮಯೂರಾ ಶಿವಾಳಕರ, ರೂಪಾ ಮುನವಳ್ಳಿ, ವಿಜಯಲಕ್ಷ್ಮೀ ಸಿದ್ದಾಪುರಮಠ, ನಿವೇದಿತಾ ಸಿದ್ನಾಳ, ಶರಣ ಸಂಸ್ಕೃತಿ ಉತ್ಸವ ಸಮಿತಿ ಅಧ್ಯಕ್ಷ ಶಂಕರ ಗೋರೋಶಿ, ಕಾರ್ಯದರ್ಶಿ ಬಸವರಾಜ ಉಳ್ಳಾಗಡ್ಡಿ, ಮಹಾಂತೇಶ ಕುಡಚಿ ಇತರರಿದ್ದರು.