ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಡಿಎಸ್‌ಎಸ್, ಕರವೇ ಹಾಗೂ ರೈತ ಸಂಘ ಸೇರಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಯರಗಟ್ಟಿ ಪಟ್ಟಣ ಪಂಚಾಯಿತಿ ಎದುರು ಅನಿರ್ದಿಷ್ಟಾವಧಿ ಧರಣಿ ಕೈಗೊಂಡರು. ಭಾಸ್ಕರ ಹಿರೇಮೆತ್ರಿ, ಸೋಮು ರೈನಾಪುರ ಇತರರಿದ್ದರು.
ಯರಗಟ್ಟಿ: ಭ್ರಷ್ಟಾಚಾರಮುಕ್ತ ಪಟ್ಟಣ ಪಂಚಾಯಿತಿ ಹಾಗೂ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಡಿಎಸ್‌ಎಸ್, ಕರವೇ ಹಾಗೂ ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಪಟ್ಟಣ ಪಂಚಾಯಿತಿ ಎದುರು ಸೋಮವಾರ ಅನಿರ್ದಿಷ್ಟಾವಧಿ ಧರಣಿ ಕೈಗೊಂಡರು.
ಡಿಎಸ್‌ಎಸ್ ಮುಖಂಡ ಸಂತೋಷ ಚನ್ನಮೇತ್ರಿ ಹಾಗೂ ಕರವೇ ತಾಲೂಕಾಧ್ಯಕ್ಷ ಡಿ.ಕೆ.ರಫೀಕ್ ಮಾತನಾಡಿ, ಅಂಬೇಡ್ಕರ ನಗರ, ಕೆಇಬಿ ಬಳಿಯ ಪ್ರದೇಶಗಳಲ್ಲಿ ದೇಸಾಯಿ ಅವರು ದಾನವಾಗಿ ನೀಡಿರುವ ಜಾಗದಲ್ಲಿ ವಾಸಿಸುತ್ತಿರುವ ಭಿಕ್ಷುಕರು ಹಾಗೂ ಕಡು ಬಡುವರಿಗೆ ಪಟ್ಟಣ ಪಂಚಾಯಿತಿಯಲ್ಲಿ ಉತಾರ ನೀಡಲು ಹಣದ ಬೇಡಿಕೆ ಇಡುತ್ತಿದ್ದಾರೆ. ಹೀಗಾಗಿ, ಬಡವರು ಕಚೇರಿಗೆ ಅಲೆದಾಡಿ ಕಂಗಾಲಾಗಿದ್ದಾರೆ. ಇಂತಹ ಭ್ರಷ್ಟ ಅಧಿಕಾರಿಗಳನ್ನು ಕೂಡಲೇ ವರ್ಗಾಯಿಸಬೇಕು. ಇಲ್ಲವಾದಲ್ಲಿ ಹೋರಾಟ ನಿರಂತರವಾಗಲಿದೆ ಎಂದು ಎಚ್ಚರಿಸಿದರು.
ಮುಖಂಡರಾದ ಭಾಸ್ಕರ ಹಿರೇಮೆತ್ರಿ, ಸೋಮು ರೈನಾಪುರ, ಚಿದಂಬರ ಕಟ್ಟಿಮನಿ, ಫಾರೂಕ್ ಅತ್ತಾರ, ಮಂಜುನಾಥ ಭಾವಿಹಾಳ, ರಮೇಶ ಪಟ್ಟೆಪ್ಪನವರ, ಶಾಮಣ್ಣ ಕಾರ್ಯಪ್ಪನವರ, ರಾಯಪ್ಪ ಕರಿಗಾರ, ಲಕ್ಷ್ಮಣ ಕರಿಗಣ್ಣವರ ಇತರರಿದ್ದರು.