ಅಥಣಿ ವಿದ್ಯಾವರ್ಧಕ ಶಾಲೆಯ ಹಳೆಯ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಸ್ನೇಹ ಸಮ್ಮೇಳನ, ಗುರುವಂದನಾ ಕಾರ್ಯಕ್ರಮದಲ್ಲಿ ಎಂ.ಎಸ್. ದೇಸಾಯಿ, ಮೃತ್ಯುಂಜಯ ಹಿರೇಮಠ, ವಾಸುದೇವ ಜೋಶಿ, ನರಸಗೌಡ ಗಸ್ತಿ ಇತರರಿದ್ದರು.
ಅಥಣಿ: ಸ್ನೇಹದಲ್ಲಿ ನಂಬಿಕೆ, ವಿಶ್ವಾಸ, ಸಹಕಾರ ಮನೋಭಾವ ಇದ್ದಲ್ಲಿ ಆ ಸ್ನೇಹ ಚಿರಕಾಲ ನೆನಪಿನಲ್ಲಿ ಉಳಿಯುತ್ತದೆ ಎಂದು ವಿದ್ಯಾವರ್ಧಕ ಶಾಲೆಯ ಮುಖ್ಯಶಿಕ್ಷಕ ಎಂ.ಎಸ್.ದೇಸಾಯಿ ಹೇಳಿದರು.
ನಗರದ ಕ್ಲೌಡ್ ಸಭಾಂಗಣದಲ್ಲಿ ಸ್ಥಳೀಯ ವಿದ್ಯಾವರ್ಧಕ ಪ್ರೌಢಶಾಲೆಯ 2003ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಶುಕ್ರವಾರ ಹಮ್ಮಿಕೊಂಡಿದ್ದ ಸ್ನೇಹ ಸಮ್ಮೇಳನ ಮತ್ತು ಗುರುವಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಒಬ್ಬರ ಸಂತೋಷ, ಕಷ್ಟಗಳಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು. ನೊಂದವರಿಗೆ ಸಾಂತ್ವನ ಹೇಳುವ ಜತೆಗೆ ಒಳ್ಳೆಯ ಕಾರ್ಯ ಮಾಡಬೇಕು ಎಂದರು.
ಶಿಕ್ಷಕ ಮೃತ್ಯುಂಜಯ ಹಿರೇಮಠ ಮಾತನಾಡಿ, ಹಿರಿಯ ವಿದ್ಯಾರ್ಥಿಗಳ ಪ್ರೀತಿ, ವಿಶ್ವಾಸ ಸದಾಕಾಲ ಹೀಗೆ ಇರಲಿ. ಗುರು-ಹಿರಿಯರು, ತಂದೆ-ತಾಯಿ ಗೌರವಿಸುವ ಜತೆಗೆ ಗೆಳೆಯರ ನೋವು, ನಲಿವುಗಳಿಗೆ ಸ್ಪಂದಿಸಬೇಕು ಎಂದರು.
ಶಿಕ್ಷಕರಾದ ವಾಸುದೇವ ಜೋಶಿ, ನರಸಗೌಡ ಗಸ್ತಿ, ಮಹೇಶ ಕುರುಬರ ಮಾತನಾಡಿದರು. ವಿದ್ಯಾರ್ಥಿಗಳಾದ ಪವನ ಪಾಟೀಲ, ಅರುಣ ಮುದಕಣ್ಣವರ, ಸ್ಮೀತಾ ಕರಣಿ, ದಯಾನಂದ ಅಸ್ಕಿ, ಶಿಲ್ಪಾ ಕಾಮನ, ರಜನಿ ಹಡಲಗಿ ಅನಿಸಿಕೆ ಹಂಚಿಕೊಂಡರು.
ಎಲ್ಲ ಶಿಕ್ಷಕರನ್ನು ಗೌರವಿಸಲಾಯಿತು. ಡಾ.ಆನಂದ ಮೊಳೇಕರ, ಸಚಿನ ಶೀಲವಂತ, ಹರೀಶ ಮಿರಜಕರ, ಸಿದ್ದೇಶ ಹೊನವಾಡಮಠ, ಶ್ವೇತಾ ಅವಟಿಮಠ, ಬಸವರಾಜ ಬಕಾರಿ, ಮಂಜುನಾಥ ಹುನ್ನೂರ, ನಿತೀನ ದೇವಮಾನೆ, ವಿನೋದ ಕಲಮಡಿ ಇತರರಿದ್ದರು.