ಬೆಳಗಾವಿ: ನಗರದ ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆ ವತಿಯಿಂದ ಜ.10ರಂದು ಅನಗೋಳ ಭಾಗದ ಸುಭಾಷನಗರದ ದೊಡ್ಡ ಬಸ್ತಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ.
ಆಸ್ಪತ್ರೆ ತಜ್ಞ ವೈದ್ಯರು ರಕ್ತದೊತ್ತಡ, ಮಧುಮೇಹ, ಕೆಮ್ಮು, ನೆಗಡಿ, ಎಲುಬು ಕೀಲು, ಸಂಧಿವಾತ, ಬೆನ್ನು ನೋವು, ಕತ್ತು ನೋವು ಮತ್ತಿತರ ಎಲುಬು-ಕೀಲು ಸಂಬಂಧಿತ ಸಮಸ್ಯೆಗಳು, ಚಿಕ್ಕಮಕ್ಕಳಿಂದ ಮಕ್ಕಳ ಆರೋಗ್ಯ ಸಮಸ್ಯೆಗಳು, ಕಣ್ಣಿನ ತಜ್ಞರಿಂದ ಮೋತಿ ಬಿಂದು ಹಾಗೂ ಮತ್ತಿತರ ಕಣ್ಣಿನ ಸಮಸ್ಯೆಗಳನ್ನು ಪರೀಕ್ಷಿಸಲಿದ್ದಾರೆ.
ಶಿಬಿರದ ವಿಶೇಷವೆಂಬಂತೆ ಆಸ್ಪತ್ರೆಯ ಭೌತಿಕ ಚಿಕಿತ್ಸೆ (ಫಿಜಿಯೋಥೆರಫಿ) ಸಹ ಶಿಬಿರದ ಭಾಗವಾಗಿ ನೀಡಲಾಗಿದೆ ಎಂದು ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಸಂಜಯ ಕಂಬಾರ, ಆಸ್ಪತ್ರೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ ದೇಸಾಯಿ ತಿಳಿಸಿದ್ದಾರೆ.