ಗೋಕಾಕ ನಗರದ ಕಡಬಗಟ್ಟಿ ರಸ್ತೆಯಲ್ಲಿ ಚೌಡೇಶ್ವರಿದೇವಿ ವನ ನಿರ್ಮಾಣ ಕಾಮಗಾರಿಗೆ ಶಾಸಕ ರಮೇಶ ಜಾರಕಿಹೊಳಿ ಭೂಮಿಪೂಜೆ ನೆರವೇರಿಸಿದರು. ಪ್ರಭಾಕರ ಪ್ರಿಯದರ್ಶಿ, ವಾಸೀಂರಾಜ ತೆನಗಿ, ಆನಂದ ಹೆಗಡೆ ಇತರರಿದ್ದರು. 
ಬೆಳಗಾವಿ

ಜನರ ಅನುಕೂಲಕ್ಕಾಗಿ ವನ ನಿರ್ಮಾಣ

ಪ್ರಮುಖ ಮುಖ್ಯಾಂಶಗಳು

  • ಶಾಸಕ ರಮೇಶ ಜಾರಕಿಹೊಳಿ ಮಾಹಿತಿ
  • ಕಾಮಗಾರಿಗೆ ಚಾಲನೆ
ಗೋಕಾಕ: ಜನರ ಅನುಕೂಲಕ್ಕಾಗಿ ನಗರದಲ್ಲಿ ಚೌಡೇಶ್ವರಿದೇವಿ ವನ ನಿರ್ಮಾಣ ಮಾಡಲಾಗುತ್ತಿದೆ. ಗೋಕಾಕ ಮಾದರಿ ಕ್ಷೇತ್ರವನ್ನಾಗಿಸಲು ಶ್ರಮಿಸಲಾಗುವುದು ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ನಗರದ ಕಡಬಗಟ್ಟಿ ರಸ್ತೆಯ ಚೌಡೇಶ್ವರಿ ದೇವಸ್ಥಾನದ ಬಳಿ ಅರಣ್ಯ ಇಲಾಖೆ ಯೋಜನೆಯಡಿ 1 ಕೋಟಿ ರೂ. ವೆಚ್ಚದಲ್ಲಿ ಚೌಡೇಶ್ವರಿದೇವಿ ವನ ನಿರ್ಮಾಣ ಕಾಮಗಾರಿಗೆ ಈಚೆಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಗೋಕಾಕ ನಗರ ಹಾಗೂ ತಾಲೂಕಿನ ಅಭಿವೃದ್ಧಿಗಾಗಿ ಅನೇಕ ಜನಪರ ಕಾರ್ಯ ಕೈಗೊಳ್ಳಲಾಗುತ್ತಿದ್ದು, ಜನರ ಸಹಕಾರ ಅಗತ್ಯ ಎಂದು ತಿಳಿಸಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರ ಪ್ರಿಯದರ್ಶಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಾಸೀಂರಾಜ ತೆನಗಿ, ವಲಯ ಅರಣ್ಯಾಧಿಕಾರಿ ಆನಂದ ಹೆಗಡೆ, ಸಿಬ್ಬಂದಿ ಹನಮಂತ ಇಂಗಳಗಿ, ಮಲ್ಲಪ್ಪ ತೇಲಿ, ಹನುಮಂತ ಹಮ್ಮನವರ ಇತರರಿದ್ದರು.