ಮೂಡಲಗಿ ಪಟ್ಟಣದ ಕುರುಹಿನಶೆಟ್ಟಿ ಅರ್ಬನ್​ ಕೋ&ಆಪ್​ ಕ್ರೆಡಿಟ್​ ಸೊಸೈಟಿಯಲ್ಲಿ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಜರುಗಿತು. ಎಸ್​.ಎಸ್​.ಪಾಟೀಲ, ಗಂಗಾಧರ ಬಿಜಗುಪ್ಪಿ, ಸೈದಪ್ಪ ಗದಾಡಿ ಇತರರಿದ್ದರು. 
ಬೆಳಗಾವಿ

ವಿದೇಶಿ ವಸ್ತುಗಳಿಂದ ಆರ್ಥಿಕತೆಗೆ ಹಾನಿ

ಸೋಮಲಿಂಗ ತಳವಾರ
ಮೂಡಲಗಿ: ವಿದೇಶ ವಸ್ತುಗಳು ಬಳಸಿದಷ್ಟು ದೇಶದ ಆರ್ಥಿಕತೆಗೆ ಹಾನಿಯಾಗುತ್ತದೆ. ಸ್ವದೇಶಿ ಉತ್ಪನ್ನ ಬಳಸಿದಷ್ಟು ಆತ್ಮನಿರ್ಭರ ಭಾರತ ಗಟ್ಟಿಗೊಳ್ಳುತ್ತದೆ ಎಂದು ಅರ್ಬನ್​ ಬ್ಯಾಂಕ್​ ವ್ಯವಸ್ಥಾಪಕ ಎಸ್​.ಎಸ್​.ಪಾಟೀಲ ಹೇಳಿದರು.
ಪಟ್ಟಣದ ಕುರುಹಿನಶೆಟ್ಟಿ ಅರ್ಬನ್​ ಕೋ&ಆಪ್​ ಕ್ರೆಡಿಟ್​ ಸೊಸೈಟಿ ಸಭಾಂಗಣದಲ್ಲಿ ತಾಲೂಕು ಸಹಕಾರ ಸಂಗಳ ಒಕ್ಕೂಟ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಆತ್ಮನಿರ್ಭರ ಭಾರತ ಸಾಧನೆಗೆ ವಾಹಕಗಳಾಗಿ ಸಹಕಾರ ಸಂಸ್ಥೆಗಳು ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ, ಗ್ರಾಮಿಣ ೇತ್ರದ ಜನರ ಆದಾಯ ವೃದ್ಧಿಸಿದಾಗ ಮಾತ್ರ ಭಾರತ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.
ಕಸಾಪ ಅಧ್ಯ ಡಾ.ಸಂಜಯ ಸಿಂಧಿಹಟ್ಟಿ ಮಾತನಾಡಿ, ಒಬ್ಬರ ಶ್ರಮ, ಮತ್ತೊಬ್ಬರ ಬಲದಿಂದ ರೂಪುಗೊಂಡ ಸಹಕಾರ ಸಂಗಳು ಆತ್ಮನಿರ್ಭರ ಭಾರತದ ಕನಸು ನನಸಾಗಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂದರು.
ಚೈತನ್ಯ ಸೊಸೈಟಿ ಪ್ರಧಾನ ಕಾರ್ಯದರ್ಶಿ ಗಂಗಾಧರ ಬಿಜಗುಪ್ಪಿ, ಸಿಎ ಸೈದಪ್ಪ ಗದಾಡಿ, ಕುರುಹಿನಶೆಟ್ಟಿ ಸಂದ ಸುಭಾಸ ಬೆಳಕೂಡ ಮಾತನಾಡಿದರು.
ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ತಮ್ಮಣ್ಣ ಕೆಂಚರಡ್ಡಿ, ಸಂಗಪ್ಪ ನಿಡಗುಂದಿ, ಜಿಲ್ಲಾ ಸಹಕಾರ ಒಕ್ಕೂಟ ನಿರ್ದೇಶಕ ವರ್ಧಮಾನ ಭೋಳಿ, ಸಹಕಾರಿ ಧುರಿಣ ಬಸಪ್ಪ ಬೆಳಕೂಡ ಇತರರಿದ್ದರು. ಗಂಗಾಧರ ಬಿಜಗುಪ್ಪ ಸ್ವಾಗತಿಸಿದರು. ಭರತೇಶ ಉಪ್ಪಿನ ನಿರೂಪಿಸಿದರು. ಚನಬಸು ಬಗನಾಳ ವಂದಿಸಿದರು.