ಮುನವಳ್ಳಿ ಪಟ್ಟಣದ ಅನ್ನದಾನೀಶ್ವರ ಕಾಲೇಜಿನ ಪ್ರಥಮ ವರ್ಷದ ಪಿಯು ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವನ್ನು ಎಂ.ಎಂ.ಬಿದರಗಡ್ಡಿ ಉದ್ಘಾಟಿಸಿದರು. ಮುರುಘೇಂದ್ರ ಸ್ವಾಮೀಜಿ, ವಿರೂಪಾಕ್ಷ ಸ್ವಾಮೀಜಿ, ಮಾರುತಿ ಬಸಳಿಗುಂದಿ, ಎಂ.ಎಚ್.ಪಾಟೀಲ ಇತರರಿದ್ದರು.
- ಎಂ.ಎಂ.ಬಿದರಗಡ್ಡಿ ಅಭಿಪ್ರಾಯ
- ಪಠ್ಯೇತರ ಚಟುವಟಿಕೆಗಳ ಕಾರ್ಯಕ್ರಮ ಉದ್ಘಾಟನೆ
ಮುನವಳ್ಳಿ: ಜೀವನದಲ್ಲಿ ಯಶಸ್ವಿಯಾಗಬೇಕಾದರೆ ತಂದೆ-ತಾಯಿ ಪ್ರೀತಿ ಜತೆಗೆ ಸದ್ಗುರುವಿನ ಆಶೀರ್ವಾದವೂ ಅಗತ್ಯ ಎಂದು ಬಿಜೆಪಿ ಮುಖಂಡ ಎಂ.ಎಂ.ಬಿದರಗಡ್ಡಿ ಹೇಳಿದರು.
ಶ್ರೀ ಮುರುಘರಾಜೇಂದ್ರ ಯೋಗ ವಿದ್ಯಾ ಕೇಂದ್ರ ಸಂಚಾಲಿತ ಶ್ರೀ ಅನ್ನದಾನೇಶ್ವರ ಪಪೂ ಮಹಾವಿದ್ಯಾಲಯದ ಪ್ರಥಮ ಪಿಯು ವಿದ್ಯಾರ್ಥಿಗಳ ಸ್ವಾಗತ ಹಾಗೂ ಪಠ್ಯೇತರ ಚಟುವಟಿಕೆಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮೂರುಸಾವಿರ ವಿರಕ್ತಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿ ಮಾತನಾಡಿ, ಸಮಾಜದಲ್ಲಿ ನೈತಿಕತೆ ಕುಸಿತಕ್ಕೆ ಉತ್ತಮ ಗುಣಗಳ ಕೊರತೆಯೇ ಮುಖ್ಯ ಕಾರಣ. ಹೀಗಾಗಿ, ಪಾಲಕರು ಮಕ್ಕಳಿಗೆ ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ ನೀಡಬೇಕು ಎಂದರು.
ಸಂಸ್ಥೆ ಅಧ್ಯಕ್ಷ ಮುರುಘೇಂದ್ರ ಸ್ವಾಮೀಜಿ ಮಾತನಾಡಿ, ಸಂಸ್ಥೆ ಇಷ್ಟು ಎತ್ತರಕ್ಕೆ ಬೆಳೆಯಲು ಸಹಕರಿಸಿದ ಗುರು ಹಿರಿಯರನ್ನು, ರಾಜಕೀಯ ಮುಖಂಡರನ್ನು ಸ್ಮರಿಸಿ, ಮುಂದಿನ ದಿನಗಳಲ್ಲಿ ಸಂಸ್ಥೆಯಿಂದ ಪಿಯು ವಿಜ್ಞಾನ ಕಾಲೇಜು ಪ್ರಾರಂಭಿಸಲಾಗುವುದು ಎಂದರು.
ಪಿಯುಸಿಯಲ್ಲಿ ಸಾಧನೆಗೈದ 67 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಎಪಿಎಂಸಿ ಉಪಾಧ್ಯಕ್ಷ ಮಾರುತಿ ಬಸಳಿಗುಂದಿ, ಅಡಿವೆಪ್ಪ ಸಿಂಗನ್ನವರ, ಉದಯ ಬಾಳಿ, ಹನುಮಂತ ಸಿಂಗನ್ನವರ, ಎ್.ವೈ.ಮುಶೆನ್ನವರ, ರುದ್ರಪ್ಪ ಬೆಲ್ಲದ, ವಿ.ಸಿ.ಮಡ್ಡಿ, ಮಮತಾ ಬಣಗಾರ, ಜಿ.ಎ.ಅವತಾರಿ, ಎಂ.ಎನ್.ಜಮಖಂಡಿ, ಶಂಕರ ಗಯ್ಯಳಿ, ಗಂಗಾಧರ ಗೊರಾಬಾಳ, ಪ್ರಾಚಾರ್ಯ ಎಂ.ಎಚ್.ಪಾಟೀಲ, ಕೆ.ಬಿ.ನಲವಡೆ, ಬಿ.ಬಿ.ಪಾಟೀಲ, ಎಂ.ಸಿ.ಬಾಂಡೇಕರ, ಶೇಖರ ಮುಪ್ಪಿನವರಮಠ, ಐ.ಕೆ.ಮಠಪತಿ, ಗಾಯತ್ರಿ ಹಿರೇಮಠ, ಜಿ.ಜಿ.ಲಮಾಣಿ, ರವಿ ಪೂಜಾರ, ದಾನಯ್ಯ ಗದಗಿನ, ಎನ್.ಎಸ್.ಕಬ್ಬೂರ, ನಾಗರಾಜ ಕಮ್ಮಾರ ಇತರರಿದ್ದರು.