ಕಕಮರಿಯ ಅಮ್ಮಾಜೇಶ್ವರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಸಿದ್ಧೇಶ್ವರ ಹಿರೇಮಠ ಉದ್ಘಾಟಿಸಿದರು. ಆತ್ಮಾರಾಮ ಸ್ವಾಮೀಜಿ, ಅಪ್ಪಾಸಾಬ ಈರಗೌಡ, ಗಿರಮಲ್ಲ ಜನಗೌಡ ಇತರರಿದ್ದರು.
- ಸಿದ್ಧೇಶ್ವರ ಹಿರೇಮಠ ಕರೆ
- ಅಮ್ಮಾಜೇಶ್ವರಿ ಶಾಲೆಯಲ್ಲಿ ಬೀಳ್ಕೊಡುಗೆ
ಕಕಮರಿ: ಆಸ್ತಿ, ಅಂತಸ್ತಿಗಿಂತ ಕಲಿತ ವಿದ್ಯೆ ಶ್ರೇಷ್ಟವಾದುದು ಎಂದು ಉದ್ಯಮಿ ಸಿದ್ಧೇಶ್ವರ ಹಿರೇಮಠ ಹೇಳಿದರು.
ಗ್ರಾಮದ ಅಮ್ಮಾಜೇಶ್ವರಿ ಪ್ರೌಢಶಾಲೆಯಲ್ಲಿ ಈಚೆಗೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ಶಿಕ್ಷಣ ಸಂಸ್ಥೆ ಪ್ರತಿಭಾವಂತರನ್ನು ರೂಪಿಸುವ ಕೇಂದ್ರವಾಗಿದೆ. ವಿದ್ಯಾರ್ಥಿಗಳು ಗುರುಗಳು ತೋರಿದ ಮಾರ್ಗದಲ್ಲಿ ಸಾಗಿ ಸಾಧನೆ ಮಾಡಬೇಕು ಎಂದರು.
ಗುರುದೇವಾಶ್ರಮದ ಆತ್ಮಾರಾಮ ಸ್ವಾಮೀಜಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸಾಽಸುವ ಛಲ ಇರಬೇಕು. ವಿದ್ಯಾರ್ಥಿಗಳು ನಕಾರಾತ್ಮಕ ಚಿಂತನೆ ಬಿಟ್ಟು, ಸಕಾರಾತ್ಮಕ ಚಟುವಟಿಕೆಗಳಲ್ಲಿ ತೊಡಗಬೇಕು ಎಂದರು.
ಸAಸ್ಥೆ ಅಧ್ಯಕ್ಷ ಅಪ್ಪಾಸಾಬ ಈರಗೌಡ, ಗಿರಮಲ್ಲ ಜನಗೌಡ, ಲಕ್ಷ್ಮಣ ಗುರ್ಕಿ, ಅಣ್ಣಾಸಾಬ ಬಿಜ್ಜರಗಿ, ಎಂ.ಎನ್.ವಾಲಿ, ಸಂಗಮೇಶ ಹೂಗಾರ, ಮುಖ್ಯಶಿಕ್ಷಕ ವಿ.ಎಸ್.ಕುಲಕರ್ಣಿ, ಬೀರಪ್ಪ ಅಸ್ಕಿ, ಎಸ್.ಜಿ.ರೆಹಮತಪುರ, ಇಲಾಹಿ ಕೊಕಟನೂರ, ಸಂಗಮೇಶ ಬಿಳ್ಳೂರ, ಶಿಕ್ಷಕರಾದ ಎ.ಎಸ್.ಗಡಾಲೋಟಿ, ಎಸ್.ಆರ್.ಪೂಜಾರಿ, ಎಸ್.ಎಚ್.ಜಡಿನವರ, ಎಸ್.ಎಲ್.ಕಾತ್ರಾಳ, ಎಸ್.ಎ.ಈರಗೌಡ, ಆರ್.ಪಿ. ಪೂಜಾರಿ, ಎಸ್.ಆರ್. ಬಿರಾದಾರ ಇತರರಿದ್ದರು.