ಸಿಂಧೂರ ವಸತಿ ಅಪ್ಪಯ್ಯ ಸ್ವಾಮಿ ಜಾತ್ರೆ ಅಂಗವಾಗಿ ಹಮ್ಮಿಕೊಂಡಿದ್ದ ಪ್ರಥಮ ಶಿವಾನುಭವಗೋಷ್ಠಿಯಲ್ಲಿ ಗುರು ಚನ್ನಬಸವ ಸ್ವಾಮೀಜಿ ಮಾತನಾಡಿದರು. ಜ್ಞಾನೇಶ್ವರ ಸ್ವಾಮೀಜಿ, ಮಹಾದೇವ ಹಾಲಳ್ಳಿ, ಸಂಗಯ್ಯ ಸ್ವಾಮೀಜಿ, ಅಪ್ಪು ಮಾಳಿ ಇತರರಿದ್ದರು. 
ಬೆಳಗಾವಿ

ಅಪ್ಪಯ್ಯ ಸ್ವಾಮೀಜಿ ಮಾರ್ಗದಲ್ಲಿ ನಡೆಯಿರಿ

ಐಗಳಿ: ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ಕಾರ್ಯ ಮಾಡಿದರೆ ಯಶಸ್ಸು ಖಚಿತ ಎಂದು ಬಿಳ್ಳೂರ ಮಠದ ಪೀಠಾಧ್ಯಕ್ಷ ಗುರು ಚನ್ನಬಸವ ಸ್ವಾಮೀಜಿ ಹೇಳಿದರು.
ಸಿಂಧೂರ ವಸತಿ ಅಪ್ಪಯ್ಯ ಸ್ವಾಮಿ ಜಾತ್ರೆ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಪ್ರಥಮ ಶಿವಾನುಭವಗೋಷ್ಠಿಯಲ್ಲಿ ಆಶೀರ್ವಚನ ನೀಡಿದ ಅವರು, ನಾಡಿನ ಅನೇಕ ಸಂತರು, ಶರಣರು, ಮಹಾತ್ಮರು, ತಪಸ್ವಿಗಳು, ಶಿವಯೋಗಿಗಳಲ್ಲಿ ಲಿಂ.ಅಪ್ಪಯ್ಯ ಸ್ವಾಮೀಜಿಯೂ ಒಬ್ಬರು. ಶ್ರೀಗಳು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆಯಿರಿ ಎಂದರು.
ನಾಗರಾಳದ ಜ್ಞಾನೇಶ್ವರ ಸ್ವಾಮೀಜಿ ಮಾತನಾಡಿ, ಮಕ್ಕಳಿಗೆ ಸಂಸ್ಕಾರ ನೀಡಿ ಉತ್ತಮ ಪ್ರಜೆಯಾಗಿ ಬೆಳೆಸಬೇಕು ಎಂದರು.
ಕಮಿಟಿ ಉಪಾಧ್ಯಕ್ಷ ಮಹಾದೇವ ಹಾಲಳ್ಳಿ, ಬಾಡಗಿಯ ಸಂಗಯ್ಯ ಸ್ವಾಮೀಜಿ, ಅಪ್ಪು ಮಾಳಿ, ಗ್ರಾಪಂ ಮಾಜಿ ಸದಸ್ಯ ರವೀಂದ್ರ ಹಾಲಳ್ಳಿ, ಜಗದೀಶ ತೆಲಸಂಗ, ದೇವೆಂದ್ರ ಬೆಳಗಲಿ, ನಿಂಗಪ್ಪ ತೆಲಸಂಗ, ಶಿವಾನಂದ ಸಿಂಧೂರ, ಮಲಗೌಡ ಪಾಟೀಲ, ಕೇದಾರಿ ಬಿರಾದಾರ ಇತರರಿದ್ದರು. ಎಸ್.ಎಂ.ಜನಗೌಡ ಸ್ವಾಗತಿಸಿದರು. ಜಗದೀಶ ಕೋರಬು ವಂದಿಸಿದರು.

ಆರೋಗ್ಯ ತಪಾಸಣೆ ಉಚಿತ ಶಿಬಿರ

ಸಿಂಧೂರ ವಸತಿಯ ಅಪ್ಪಯ್ಯ ಸ್ವಾಮೀಜಿ ಜಾತ್ರೆ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಆರೋಗ್ಯ ಉಚಿತ ತಪಾಸಣೆ ಕಾರ್ಯಕ್ರಮಕ್ಕೆ ಡಾ.ಉಮಾಮಹೇಶ್ವರ ಸಿಂಧೂರ ಚಾಲನೆ ನೀಡಿದರು.ಅಪ್ಪಯ್ಯ ಸ್ವಾಮಿ ಸೇವಾ ಸಮಿತಿ ಕಾರ್ಯದರ್ಶಿ ಮಲಗೌಡ ಪಾಟೀಲ, ಹನುಮಂತ ಕರಿಗಾರ, ಕಮಿಟಿ ಅಧ್ಯಕ್ಷ ನರಸಪ್ಪ ಸಿಂಧೂರ, ಉಪಾಧ್ಯಕ್ಷ ಮಹಾದೇವ ಹಾಲಳ್ಳಿ, ಆಸ್ಪತ್ರೆ ಸಿಬ್ಬಂದಿ ಡಾ.ಸುಧಾರಾಣಿ, ಅಕ್ಷಯ ವಾಲಿಕಾರ ಇತರರಿದ್ದರು.