ಅಡಹಳ್ಳಿ ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ಸುನೀಲ ಕೆಂಚಣ್ಣವರ, ಈರಗೌಡ ಪಾಟೀಲ, ಬಸವಂತ ಗುಡ್ಡಾಪುರ, ಪರಸಪ್ಪ ಅಥಣಿ, ಆನಂದ ದೂಳಶೆಟ್ಟಿ ಇತರರಿದ್ದರು. 
ಬೆಳಗಾವಿ

ಜಾನಪದ ಕಲೆ ಪೂರ್ವಜರ ಜೀವನಾಡಿ

ಅಥಣಿ ಗ್ರಾಮೀಣ: ಭಾರತೀಯ ಸಂಸ್ಕೃತಿ, ಪರಂಪರೆ ಹಾಗೂ ಜಾನಪದ ಕಲೆ ಉಳಿವಿಗೆ ಮುಂದಾಗಬೇಕು ಎಂದು ಅಥಣಿ ಕಾಡಸಿದ್ಧೇಶ್ವರ ಮಠದ ಡಾ.ಕಾಡಯ್ಯ ಸ್ವಾಮೀಜಿ ಹೇಳಿದರು.
ಅಥಣಿ ತಾಲೂಕಿನ ಅಡಹಳ್ಳಿ ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬೆಳಗಾವಿಯ ಸಪ್ತಸ್ವರ ಸಂಗೀತ ಕಲಾ ಬಳಗದ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಜಾನಪದ ವೈಭವ-2026 ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಜಾನಪದ ಕಲೆಗಳು ಪೂರ್ವಜರ ಜೀವನಾಡಿಯಾಗಿವೆ. ಸಿನಿಮಾ, ರಿಯಾಲಿಟಿ ಶೋ ಭರಾಟೆ ಮಧ್ಯದಲ್ಲಿಯೋ ಜಾನಪದಗಳು ತಮ್ಮ ಅಸ್ತಿತ್ವ ಉಳಿಸಿಕೊಂಡಿವೆ. ಕಲಾವಿದರ ಮಾಸಾಶನಕ್ಕೆ 58 ವಯೋಮಿತಿ ನಿಗದಿ ಮಾಡಿರುವುದು ಸ್ವಾಗತಾರ್ಹ ಎಂದರು.
ಪಿಕೆಪಿಎಸ್ ಮಾಜಿ ಅಧ್ಯಕ್ಷ ಸುನೀಲ ಕೆಂಚಣ್ಣವರ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಅನೇಕ ಜಾನಪದ ಪ್ರತಿಭೆ ಅಡಗಿವೆ. ಅವುಗಳನ್ನು ಗುರುತಿಸಿ ಮುನ್ನೆಲೆಗೆ ತರುವ ಕೆಲಸವನ್ನು ಸರ್ಕಾರ ಮಾಡಬೇಕಿದೆ ಎಂದರು.
ಐಐಟಿಯಲ್ಲಿ ಸಾಧನೆ ಮಾಡಿದ ಆದಿತ್ಯ ಕೆಂಚಣ್ಣವರ ಹಾಗೂ ಅಗ್ನಿವೀರ ತರಬೇತಿ ಮುಗಿಸಿ ಸ್ವಗ್ರಾಮಕ್ಕೆ ಆಗಮಿಸಿದ 5 ಸೈನಿಕರು ಮತ್ತು ಹಿರಿಯ ಕಲಾವಿದರನ್ನು ಸನ್ಮಾನಿಸಲಾಯಿತು.
ಮಹಾದೇವ ಪಾಟೀಲ, ಸತ್ಯಪ್ಪ ಸನದಿ, ಶ್ರೀಶೈಲ ಹೊನವಾಡ, ಕಲ್ಮೇಶ ಗುಡಿಮನಿ, ಕರೆಪ್ಪ ಹಾದಿಮನಿ, ಸುರೇಶ ವಾಘಮೋರೆ, ಅಪ್ಪು ಗುಡದಿನ್ನಿ, ಸುನೀಲ ಕೆಂಚಣ್ಣವರ, ಈರಗೌಡ ಪಾಟೀಲ, ಬಸವಂತ ಗುಡ್ಡಾಪುರ, ಪರಸಪ್ಪ ಅಥಣಿ, ಆನಂದ ದೂಳಶೆಟ್ಟಿ, ಸುಭಾಸ ಕೋಹಳ್ಳಿ, ಮೋಹನ ಸೂರ್ಯವಂಶಿ ಇತರರಿದ್ದರು.