ನಗರದ ಫೌಂಡ್ರಿ ಕ್ಲಸ್ಟರ್ ಸಭಾಭವನದಲ್ಲಿ ಗುರುವಾರ ಸಭೆ ನಡೆಯಿತು. ಪ್ರಭಾಕರ ನಾಗರಮುನೋಳಿ, ಸಂಚಾಲಕ ಚೈತನ್ಯ ಕುಲಕರ್ಣಿ, ಎಂ.ಕೆ.ಹೆಗಡೆ, ಡಾ.ಎಚ್.ಬಿ.ರಾಜಶೇಖರ, ಬಿ.ಜಿ.ಧರೆಣ್ಣಿ, ಸಚಿನ್ ಸಬ್ನಿಸ್, ಸಿ.ಬಿ.ಹಿರೇಮಠ ಇತರರಿದ್ದರು.
ಬೆಳಗಾವಿ: ನಗರದ ಅಭಿವೃದ್ಧಿ ದೃಷ್ಟಿಯಿಂದ ಎಫ್ಒಎಬಿ ಸಂಟನೆಯ ಕಾರ್ಯ ಅತ್ಯಂತ ಪ್ರಶಂಸನೀಯವಾಗಿದೆ. ಮುಂದಿನ ದಿನಗಳಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಂಟನೆ ಮಾಡಬೇಕು ಎಂದು ಫೌಂಡ್ರಿ ಕ್ಲಸ್ಟರ್ ಚೇರ್ಮನ್ ರಾಮ ಭಂಡಾರೆ ಹೇಳಿದರು.
ನಗರದ ಫೌಂಡ್ರಿ ಕ್ಲಸ್ಟರ್ ಸಭಾಭವನದಲ್ಲಿ ಗುರುವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು. ಅಭಿವೃದ್ಧಿಗೆ ಪೂರಕವಾಗಿ ರೂಪಿಸಬೇಕಿರುವ ರೈಲ್ವೆ ಮೇಲ್ಸೇತುವೆ ಯೋಜನೆ, ಸಂಚಾರ ದಟ್ಟಣೆ ನಿವಾರಿಸಬೇಕಿರುವ ರಿಂಗ್ ರಸ್ತೆ, ಕೈತಪ್ಪಿ ಹೋಗುವ ಹಂತದಲ್ಲಿರುವ ಸಿಟೀಸ್ 2, ರ್ನಿಲಕ್ಷಕ್ಕೊಳಗಾಗಿರುವ ಸಿಡಿಪಿ ಹಾಗೂ ಎಸ್ಟಿಪಿ ಯೋಜನೆ, ತುರ್ತಾಗಿ ಮೇಲ್ದರ್ಜೆಗೇರಿಸಬೇಕಾಗಿರುವ ಹೆಸ್ಕಾಂ ಪವರ್ ಸ್ಟೇಷನ್, ಗೇಲ್ ಗ್ಯಾಸ್ ಪೈಪ್ ಲೈನ್, ಬಯೋಗ್ಯಾಸ್, ಗೋಬರ್ ಧನ್ ಯೋಜನೆ ಕುರಿತು ಚರ್ಚಿಸಲಾಯಿತು.
ಹಲಗಾ& ಮಚ್ಛೆ ಬೈ ಪಾಸ್ ಮತ್ತು ಯಡಿಯೂರಪ್ಪ ಮಾರ್ಗಕ್ಕೆ ಸಂಪರ್ಕ ಕಲ್ಪಿಸುವ ಮಹಾತ್ಮ ಫುಲೆ ರಸ್ತೆಗಳನ್ನು ಸಂಚಾರಕ್ಕೆ ಮುಕ್ತ ಮಾಡದೆ ನರದಲ್ಲಿ ಫ್ಲೆ ಓವರ್ ನಿರ್ಮಾಣದಿಂದ ಆಗಬಹುದಾದ ಸಂಚಾರ ದಟ್ಟಣೆ ಕುರಿತು ಚರ್ಚಿಸಲಾಯಿತು.
ವಾಣಿಜ್ಯೋದ್ಯಮ ಸಂದ ಅಧ್ಯ ಪ್ರಭಾಕರ ನಾಗರಮುನೋಳಿ, ಸಂಚಾಲಕ ಚೈತನ್ಯ ಕುಲಕರ್ಣಿ, ಎಂ.ಕೆ.ಹೆಗಡೆ, ಡಾ.ಎಚ್.ಬಿ.ರಾಜಶೇಖರ, ಬಿ.ಜಿ.ಧರೆಣ್ಣಿ, ಸಚಿನ್ ಸಬ್ನಿಸ್, ಸಿ.ಬಿ.ಹಿರೇಮಠ, ಯುವರಾಜ ಹುಲಜಿ, ಆನಂದ ಕುಲಕರ್ಣಿ, ಸದಾನಂದ ಹುಂಬರವಾಡಿ, ವಿಜಯ ಮುಚ್ಚಂಡಿಕರ, ರಾಜೇಂದ್ರ ಮುಂದಡ, ಪ್ರಸನ್ನ ಕೋಚರಿ ಇತರರಿದ್ದರು.