ನಿಪ್ಪಾಣಿಯ ಶ್ರೀ ಮಹಾತ್ಮಾ ಬಸವೇಶ್ವರ ಕ್ರೆಡಿಟ್ ಸೌಹಾರ್ದ ಸಹಕಾರ ಸಂಘದಿಂದ ಬೆಳಗಾವಿಯಲ್ಲಿ ಹಮ್ಮಿಕೊಂಡಿದ್ದ ಸಾಲಮೇಳವನ್ನು ಗುರುಸಿದ್ಧ ಸ್ವಾಮೀಜಿ, ಡಾ.ಸಿ.ಬಿ.ಕುರಬೆಟ್ಟಿ, ಕಿಶೋರ ಬಾಳಿ, ಶ್ರೀಕಾಮನ ಪರಮಣೆ ಉದ್ಘಾಟಿಸಿದರು. 
ಬೆಳಗಾವಿ

ಕೈಗಾರಿಕೆ ಬೆಳವಣಿಗೆಗೆ ಆರ್ಥಿಕ ನೆರವು ಅಗತ್ಯ

ವಿದ್ಯಾ ಶೆಟ್ಟನಗೌಡ್ರ

ಪ್ರಮುಖ ಮುಖ್ಯಾಂಶಗಳು

  • ಬಸವೇಶ್ವರ ಸಹಕಾರ ಸಂಘದ ಸಂಸ್ಥಾಪಕ ಅಧ್ಯಕ್ಷ ಡಾ.ಕುರಬೆಟ್ಟಿ ಅಭಿಮತ
  • ಸಾಲ ಮೇಳ ಉದ್ಘಾಟನೆ
ನಿಪ್ಪಾಣಿ: ಬೆಳಗಾವಿಯಂತಹ ಸ್ಮಾರ್ಟ್ ಸಿಟಿಯಲ್ಲಿ ಕೈಗಾರಿಕೆಗಳು ಮತ್ತು ವ್ಯವಹಾರಗಳ ಬೆಳವಣಿಗೆಗೆ ಆರ್ಥಿಕ ನೆರವು ಅತ್ಯಗತ್ಯ ಎಂದು ಸ್ಥಳೀಯ ಶ್ರೀ ಮಹಾತ್ಮಾ ಬಸವೇಶ್ವರ ಕ್ರೆಡಿಟ್ ಸೌಹಾರ್ದ ಸಹಕಾರ ಸಂಘದ ಸಂಸ್ಥಾಪಕ ಅಧ್ಯಕ್ಷ ಡಾ.ಸಿ.ಬಿ.ಕುರಬೆಟ್ಟಿ ಹೇಳಿದರು.
ಸಂಘದಿಂದ ಬೆಳಗಾವಿಯ ಕ್ಲಬ್ ರಸ್ತೆಯಲ್ಲಿರುವ ಹೋಟೆಲ್ ಇಫಾದಲ್ಲಿ ಎರಡು ದಿನಗಳ ಸಾಲ ಮೇಳವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು. ಸ್ಥಳೀಯ ಉದ್ಯಮಗಳಿಗೆ ಆರ್ಥಿಕ ನೆರವು ನೀಡುವುದು, ದೇಶದ ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡುವುದು ಈ ಮೇಳದ ಪ್ರಾಥಮಿಕ ಉದ್ದೇಶವಾಗಿದೆ ಎಂದರು.
ನಿರ್ದೇಶಕ ಶ್ರೀಕಾಂತ ಪರಮನೆ ಮಾತನಾಡಿ, ಒಟ್ಟು ೭೧೫ ಕೋಟಿ ರೂ. ಠೇವಣಿ, ೪೮೦ ಕೋಟಿ ರೂ. ಸಾಲ ವಿತರಣೆ, ೬೦,೦೦೦ ಸದಸ್ಯರು ಮತ್ತು ೫,೦೦೦ ಕೋಟಿ ರೂ. ವ್ಯವಹಾರ ವಹಿವಾಟು ನಮ್ಮ ಸಂಘದ ಮೈಲಿಗಲ್ಲು ಆಗಿದೆ. ಸಂಸ್ಥೆಯು ಪ್ರಸ್ತುತ ೮೩೩ ಕೋಟಿ ರೂ. ಕಾರ್ಯನಿರತ ಬಂಡವಾಳ ಹೊಂದಿದೆ. ಸ್ವಂತ ಏಳು ಕಟ್ಟಡ ಹೊಂದಿದ್ದು, ೨೦೨೬ರ ಮಾರ್ಚ್ ೩೧ಕ್ಕೆ ಕೊನೆಗೊಳ್ಳುವ ಅವಽಗೆ ಸಂಸ್ಥೆಯು ೧೦.೬೯ ಕೋಟಿ ರೂ. ನಿವ್ವಳ ಲಾಭ ದಾಖಲಿಸಿದೆ ಎಂದರು.
ಕಾರ್ಯಾಧ್ಯಕ್ಷ ಕಿಶೋರ ಬಾಳಿ ಬೆಳಗಾವಿಯ ಮಾಹೇಶ್ವರಿ ಅಂಧ ಮಕ್ಕಳ ಶಾಲೆಗೆ ೨೫,೦೦೦ ರೂ. ದೇಣಿಗೆ ಘೋಷಿಸಿದರು. ಬೆಳಗಾವಿಯ ಕಾರಂಜಿ ಮಠದ ಗುರುಸಿದ್ಧ ಸ್ವಾಮೀಜಿ ಆಶೀರ್ವಚನ ನೀಡಿದರು.
ಬೆಳಗಾವಿ ವಾಣಿಜ್ಯ ಮಂಡಳಿ ನಿರ್ದೇಶಕ ರಾಜೇಂದ್ರ ಮುತಗೇಕರ, ಬೆಳಗಾವಿಯ ಕ್ರೆಡೈ ಅಧ್ಯಕ್ಷ ಯುವರಾಜ ಹುಲಜಿ, ಬಿಜೆಪಿ ಮುಖಂಡ ಕಿರಣ ಜಾಧವ, ಉದ್ಯಮಿ ಸುನೀಲ ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಸಾಲಮೇಳದಲ್ಲಿ ೪೦೦ಕ್ಕೂ ಅಧಿಕ ಜನರು ಭಾಗವಹಿಸಿದ್ದರು.
ನಿರ್ದೇಶಕ ಡಾ.ಎಸ್.ಆರ್.ಪಾಟೀಲ, ಪ್ರತಾಪ ಪತನಶೆಟ್ಟಿ, ಸುರೇಶ ಶೆಟ್ಟಿ, ಮಹೇಶ ಬಾಗೇವಾಡಿ, ಅಶೋಕ ಲಿಗಾಡೆ, ರಾಜೇಶ ಪಾಟೀಲ, ದಿನೇಶ ಪಾಟೀಲ, ಪುಷ್ಪಾ ಕುರಬೆಟ್ಟಿ, ವಿಜಯಾ ಶೆಟ್ಟಿ, ಸುವರ್ಣಾ ಪಟ್ಟಣಶೆಟ್ಟಿ, ಉಮಾ ಪಾಟೀಲ, ಸಿಇಒ ಎಸ್.ಕೆ.ಆದನ್ನವರ, ಸಹಾಯಕ ಸಿಇಒ ಮಹೇಶ ಶೆಟ್ಟಿ, ಚಂದ್ರಕಾಂತ ಹಂಬರ, ಮಹಾದೇವ ಬಡಿಗೇರ ಇತರರಿದ್ದರು. ಸೋಮಲಿಂಗ ಮಾಳವಿನಕಟ್ಟಿ ಸ್ವಾಗತಿಸಿದರು. ಸೂರಜ ಘೋಡ್ಕೆ ವಂದಿಸಿದರು.