ರೈತರು ಬಿತ್ತನೆ ಚಟುವಟಿಕೆ ಸಿದ್ದತೆಯಲ್ಲಿ ತೊಡಗಿಸಿಕೊಂಡಿದೆ
ಬೆಳಗಾವಿ :ಮುಂಗಾರು ಹಂಗಾಮಿನ ಪೂರ್ವದಲ್ಲಿ ಮಳೆ ಸುರಿಯುತ್ತಿರುವ ಬೆನ್ನಲ್ಲೆ ರೈತರು ಭೂಮಿ ಸ್ವಚ್ಛತೆ, ಹದಗೊಳಿಸುವ ಮೂಲಕ ಬಿತ್ತನೆ ಚಟುವಟಿಕೆ ಸಿದ್ದತೆಯಲ್ಲಿ ತೊಡಗಿಸಿಕೊಂಡಿದೆ. ಮತ್ತೊಂದೆಡೆ ಕೃಷಿ ಇಲಾಖೆಯು ಕೂಡ ಬಿತ್ತನೆ ಬೀಜ, ರಸಗೊಬ್ಬರ ಸಂಗ್ರಹಿಸುತ್ತಿದೆ.
ಹೌದು.ಪ್ರಸಕ್ತ ಹಂಗಾಮಿನಲ್ಲಿ ಮೇ ಮೊದಲ ವಾರದಲ್ಲಿ ರಾಜ್ಯಾದ್ಯಂತ ಅಲ್ಲಲ್ಲಿ ಮಳೆ ಸುರಿಯುತ್ತಿರುವ ಹಿನ್ನೆಲೆ ಕೃಷಿ ಇಲಾಖೆಯು ಅಂದಾಜು 80.20 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು, ಸೂರ್ಯಕಾಂತಿ, ಮೆಕ್ಕೆಜೋಳ, ಶೇಂಗಾ, ರಾಗಿ, ಸೋಯಾಬಿನ್, ಹೆಸರು, ತೊಗರಿ ಸೇರಿ ವಿವಿಧ ಬೆಳೆಗಳ ಬಿತ್ತನೆಯಾಗುವ ಸಾಧ್ಯತೆಯಿತೆ. ಕಳೆದ ವರ್ಷಕ್ಕೆ ಹೋಲಿಕೆ ಶೇ.12 ರಿಂದ 17 ರಷ್ಟು ಬಿತ್ತನೆ ಪ್ರದೇಶ ಕೂಡ ಹೆಚ್ಚಳವಾಗಲಿದೆ.
ಕಳೆದ ವರ್ಷದ ಕೃಷಿ ಇಲಾಖೆಯು ಮುಂಗಾರಿನಲ್ಲಿ ರಾಜ್ಯಾದ್ಯಾಂತ ನೀರಾವರಿ-23,88, 152ಲಕ್ಷ ಹೆಕ್ಟೇರ್, ಮಳೆಯಾಶ್ರಿತ -58,46,912 ಲಕ್ಷ ಹೆಕ್ಟೇರ್ ಕೃಷಿ ಭೂಮಿ ಪ್ರದೇಶದಲ್ಲಿ ಬಿತ್ತನೆ ಗುರಿ ಹಾಕಿಕೊಂಡಿದೆ. ಅದರಲ್ಲಿ ಶೇ.90 ರಷ್ಟು ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಕೆಲ ಭಾಗದಲ್ಲಿ ಶೇ.100ರಷ್ಟು ಪ್ರದೇಶದಲ್ಲಿ ಬಿತ್ತನೆಯಾಗುವ ಮೂಲಕ ಸಾಧನೆ ಮಾಡಿತ್ತು. ಆದರೆ, ಅತಿವೃಷ್ಟಿ, ಅನಾವೃಷ್ಟಿಯಿಂದ ಬೆಳೆ ಹಾನಿ ಸಂಭವಿಸಿ ನಿರೀಕ್ಷಿತ ಪ್ರಮಾಣದಲ್ಲಿ ಆದಾಯ ಬಾರದೆ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ವರ್ಷ ಕೂಡ ಉತ್ತಮ ಮಳೆಯ ನಿರೀಕ್ಷೆಯಲ್ಲಿ ರೈತರು 80.20 ಲಕ್ಷ ಹೆಕ್ಟೇರ್ ಪ್ರಬಿತ್ತನೆಗೆ ಸಕಲ ಸಿದ್ಧತೆ ಮಾಡಿಕೊಂಡಿದೆ.
ಈಗಾಗಲೇ ರಾಜ್ಯದಲ್ಲಿ ಅಧಿಕ ಪ್ರಮಾಣದಲ್ಲಿ ಮಳೆಯಾಶ್ರಿತ ಪ್ರದೇಶವಿರುವುದರಿಂದ ರೈತರ ಬೇಡಿಕೆಗೆ ಅನುಗುಣವಾಗಿ ಶೇಂಗಾ, ರಾಗಿ, ಸೋಯಾಬಿನ್, ಹೆಸರು, ತೊಗರಿ, ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆಗಳ ಬಿತ್ತನೆ ಬೀಜ, ರಸಗೊಬ್ಬರ ಸಂಗ್ರಹಿಸಿಕೊಳ್ಳಲು ಕೃಷಿ ಇಲಾಖೆಗೆ ಕ್ರಮ ವಹಿಸಿದೆ. ಕೆಲ ಭಾಗದಲ್ಲಿ ಬಿತ್ತನೆ ಬೀಜದ ಗುಣಮಟ್ಟ ಪರಿಶೀಲನೆ ನಡೆಸಿ ರೈತರ ವಿತರಣೆಗೆ ಸಜ್ಜು ಮಾಡಿಕೊಂಡಿದೆ. ನೀರಾವರಿ ಪ್ರದೇಶದಲ್ಲಿ ಕಬ್ಬು, ಮೆಕ್ಕೆಜೋಳ, ಈರುಳ್ಳಿ, ಸೂರ್ಯಕಾಂತಿ ಬೆಳೆಗಳ ನಾಟಿ ಪ್ರಕ್ರಿಯೇ ವೇಗ ಪಡೆದುಕೊಂಡಿದೆ. ಹೀಗಾಗಿ ಅಂದಾಜು 1ಲಕ್ಷ ಕ್ವಿಂಟಲ್ ಬಿತ್ತನೆ ಬೀಜ, 10ಲಕ್ಷ ಟನ್‌ಗೂ ರಸಗೊಬ್ಬರ ದಾಸ್ತಾನು ಮಾಡಿಕೊಳ್ಳಲು ಕ್ರಮ ವಹಿಸಲಾಗಿದೆ. ರೈತರ ಬೇಡಿಕೆಗೆ ಅನುಗುಣವಾಗಿ ತನ್ನ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಲಾಗುತ್ತಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದೇಶಿ ಬೀಜಕ್ಕಾಗಿ ರೈತರು ಅಲೆದಾಟ
ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ದೇಶಿ ಬಿತ್ತನೆ ಬೀಜದ ಬೇಡಿಕೆ ಹೆಚ್ಚಾಗುತ್ತಿರುವ ಕಾರಣ ವಿವಿಧ ಕಂಪನಿಯ ಬಿತ್ತನೆ ಬೀಜ ಬಳಕೆಗೆ ರೈತರು ಹಿಂದೇಟು ಹಾಕುತ್ತಿದ್ದಾರೆ. ಮಳೆಯಾಶ್ರಿತ ಪ್ರದೇಶಗಳಲ್ಲಿ ರೈತರು ಸಾಂಪ್ರದಾಯಿಕ ಬಿತ್ತನೆ ಬೀಜಗಳನ್ನು ಸಂಗ್ರಹಿಸಿಕೊಂಡು ಬಿತ್ತನೆ ಮಾಡುತ್ತಿದ್ದಾರೆ. ಕೆಲವು ಕಡೆ ರೈತರು ದೇಶಿ ಬಿಜಕ್ಕಾಗಿ ಊರುಗಳಿಗೆ ಅಲೆದಾಡುತ್ತಿದ್ದಾರೆ. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ದೇಶಿ ಬೀಜ ಸಿಗುತ್ತಿಲ್ಲ. ಕೆಲ ಭಾಗದಲ್ಲಿ ರೈತರ ಮನೆಗಳಲ್ಲಿ ಮಾತ್ರ ದೇಶಿ ಬೀಜಗಳ ಬಳಕೆ ಮಾಡುತ್ತಿದ್ದಾರೆ. ಆದರೆ, ಮಾರಾಟ ಮಾಡದಿರುವುದು ಕೂಡ ಸಮಸ್ಯೆಗೆ ಮೂಲ ಕಾರಣ ಎನ್ನಲಾಗಿದೆ ಎಂದು ರೈತ ಸಂಘಟನೆಗಳ ಮುಖಂಡರು ಅಭಿಪ್ರಾಯ ಪಟ್ಟಿದ್ದಾರೆ.
..............................
ಮುಂಗಾರು ಬಿತ್ತನೆ ಪ್ರದೇಶದ ಅಂದಾಜು ವಿವರ
ಬೆಳೆ ಬಿತ್ತನೆ ಪ್ರದೇಶ (ಲಕ್ಷ ಹೆಕ್ಟೇರ್)
ಈ ಬಾರಿ ಮುಂಗಾರು ಪೂರ್ವದಲ್ಲಿ ಜಿಲ್ಲೆಯಾದ್ಯಂತ ಉತ್ತಮ ಮಳೆ ಸುರಿಯುತ್ತಿರುವ ಹಿನ್ನೆಲೆ ಬಿತ್ತನೆ ಬೀಜ, ರಸಗೊಬ್ಬರ ಸಂಗ್ರಹ ಪ್ರಕ್ರಿಯೆ ಆರಂಭಗೊಂಡಿದೆ.ಈ ವರ್ಷ ಅಂದಾಜು 7.40 ಲಕ್ಷ ಹೆಕ್ಟೇರ್ ಪ್ರದೇದಲ್ಲಿ ಬಿತ್ತನೆ ಗುರಿ ಹಾಕಿಕೊಳ್ಳಲಾಗುತ್ತಿದೆ.
- ಎಚ್.ಡಿ.ಕೋಳೇಕರ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಬೆಳಗಾವಿ