ಚನ್ನಮ್ಮನ ಕಿತ್ತೂರು ಪಟ್ಟಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡ ಬಿಷ್ಟಪ್ಪ ಶಿಂಧೆ ಮಾತನಾಡಿದರು. ವೀರೇಶ್ವರ ಸ್ವಾಮೀಜಿ, ನಿಂಗಪ್ಪ ತಡಕೋಡ, ಅಪ್ಪೇಶ ದಳವಾಯಿ ಇದ್ದರು.
ಚನ್ನಮ್ಮನ ಕಿತ್ತೂರು:
ಪಟ್ಟಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಇನ್ನುಳಿದ ರೈತರ ಸಮಸ್ಯೆ ಪರಿಹರಿಸಲು ಮುಂದಾಗಬೇಕು. ಇಲ್ಲವಾದರೆ ಮತ್ತೆ ಹೋರಾಟದ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕಾಗುತ್ತದೆ. ರೈತರು ಒಗ್ಗಟ್ಟಿನ ಲಕ್ಕೆ ಗುರ್ಲಾಪುರ ಹೋರಾಟ ಸಾಕ್ಷಿಯಾಗಿದೆ. ಸರ್ಕಾರ ಎಚ್ಚೆತ್ತು ಕಬ್ಬಿಗೆ ಉತ್ತಮ ಬೆಲೆಕೊಡಿಸಲು ಶ್ರಮಿಸಿದ ಶಶಿಕಾಂತ ಗುರೂಜಿ ಹಾಗೂ ಚೂನಪ್ಪ ಪೂಜಾರಿ ಅವರನ್ನು ಸನ್ಮಾನಿಸಲು ನ.28ರಂದು ರಾಷ್ಟ್ರೀಯ ಹೆದ್ದಾರಿ ಪಕ್ಕದ ರಾಣಿ ಚನ್ನಮ್ಮ ವೃತ್ತದಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಿದ್ದು, ಎಲ್ಲ ರೈತರು ಪಾಲ್ಗೊಂಡು ಯಶಸ್ಸಿಗಾಗಿ ಶ್ರಮಿಸಬೇಕು ಎಂದು ಮನವಿ ಮಾಡಿದರು.
ದೇಗುಲಹಳ್ಳಿ ಮಡಿವಾಳೇಶ್ವರ ಮಠದ ವೀರೇಶ್ವರ ಸ್ವಾಮೀಜಿ ಮಾತನಾಡಿ, ರೈತರ ಹೋರಾಟದಲ್ಲಿ ಎಲ್ಲರೂ ಒಂದಾಗಿದ್ದರಿಂದ ನ್ಯಾಯ ಸಿಕ್ಕಿದೆ. ಗುರ್ಲಾಪುರ ಮಾದರಿ ಹೋರಾಟ ಮುಂಬರುವ ಸಮಸ್ಯೆಗಳಿಗೆ ಶಕ್ತಿಯಾಗಬೇಕು ಎಂದರು. ವಿಜಯಕುಮಾರ ಶಿಂಧೆ, ನಿಂಗಪ್ಪ ತಡಕೋಡ, ಅಪ್ಪೇಶ ದಳವಾಯಿ, ಗಂಗಯ್ಯ ಹಿರೇಮಠ, ಪ್ರವೀಣ ಸರದಾರ, ಶಿವನಸಿಂಗ ಮೊಕಾಶಿ ಹಾಗೂ ಇತರರಿದ್ದರು.