ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಸರಹದ್ದಿನ ಗದ್ದೆಯಲ್ಲಿ ಬಾಡಗಿ ಗ್ರಾಮದ ರೆತ ಹನುಮಂತ ಭೀಮರಾಯ ಚಮಕೇರಿ (64) ಶುಕ್ರವಾರ ವಿದ್ಯುತ್ ತಗುಲಿ ಸಾವಿಗೀಡಾಗಿದ್ದಾರೆ.
ಬೆಳೆಗೆ ನೀರುಣಿಸಲು ತೆರಳಿದ ವೇಳೆ ಈ ಅವಡ ನಡೆದಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಐಗಳಿ ಠಾಣೆ ಪಿಎಸ್ಐ ಚಂದ್ರಶೇಖರ ಸಾಗನೂರ ತಿಳಿಸಿದ್ದಾರೆ. ತನಿಖಾ ಸಹಾಯಕ ಲಕ್ಷ$್ಮಣ ಅಜ್ಜಣಗಿ, ಪಿ.ಎಸ್.ಮಲಗೌಡ, ಸಂಜು ಸನಗೊಂಡ ಸ್ಥಳ ಪರಿಶೀಲನೆ ನಡೆಸಿದರು.
ಟ್ರಾನ್ಸ್ಾರ್ಮರ್ ಬದಲಿಸಲು ಆಗ್ರಹ: ಈ ಭಾಗದಲ್ಲಿ ವಿದ್ಯುತ್ ಟ್ರಾನ್ಸ್ಾರ್ಮರ್ ಹಾಗೂ ಕಂಬ ಅಳವಡಿಸಿ, ಐದು ದಶಕಗಳು ಕಳೆದಿವೆ. ಈ ಹಿನ್ನೆಲೆಯಲ್ಲಿ ಟ್ರಾನ್ಸ್ಾರ್ಮರ್, ಕಂಬ, ತಂತಿಗಳನ್ನು ಬದಲಿಸುವಂತೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಸಂಬಂಧಿಸಿದ ಅಧಿಕಾರಿಗಳು ಇನ್ನಾದರೂ ಸೂಕ್ತ ಕ್ರಮವಹಿಸಬೇಕು ಎಂದು ಚಮಕೇರಿ, ಹೆಗ್ರೆ, ಡಂಗಿ, ದಢಕೆ, ಹುದ್ದಾರ ತೋಟ ಹಾಗೂ ಪಾಟಣಕರ ತೋಟ ವಸತಿ ಪ್ರದೇಶದ ರೆತರು ಆಗ್ರಹಿಸಿದ್ದಾರೆ.