ಸವದತ್ತಿ ನಗರದಲ್ಲಿ ಗ್ರಾಮದೇವಿಯರ ಸೀಮೋಲ್ಲಂಘನ ಅಂಗವಾಗಿ ಗ್ರಾಮದೇವಿಯರ ಹೊನ್ನಾಟ ಜರುಗಿತು. ರೈತರು, ಹಳಬರು ಹಾಗೂ ಬಾಬದಾರರು ಇತರರಿದ್ದರು.
ಸವದತ್ತಿ:
ಗ್ರಾಮದೇವಿಯರಿಗೆ ಗುರ್ಲಹೊಸೂರ ಸೇರಿದಂತೆ ಪರ ಊರುಗಳ ಭಕ್ತರು ದೇವಿಯ ದರ್ಶನ ಪಡೆದು ಉಡಿ ತುಂಬಿದರು. ನಗರದೆಲ್ಲೆಡೆ ಭಂಡಾರದ ಬಣ್ಣ ಆವರಿಸಿ ಜಾತ್ರೆಯ ಸಂಭ್ರಮ ಕಂಗೊಳಿಸಿತು. ಸಂಜೆ 6 ಗಂಟೆಗೆ ದೇವಿಯ ಸೀಮೋಲ್ಲಂಘನ ಆರಂಭವಾಯಿತು. ಶಾಸ್ತ್ರೋಕ್ತ ಪೂಜೆ, ಆಚರಣೆ ಬಳಿಕ ಭಕ್ತರ ಜಯಘೋಷಗಳ ಮಧ್ಯೆ ದೇವಿಯ ಪಲ್ಲಕ್ಕಿ ಮೆರವಣಿಗೆ ಎಪಿಎಂಸಿ ಬಳಿಯ ಉಳವಿ ಚನ್ನಬಸವೇಶ್ವರ ದೇವಸ್ಥಾನದವರೆಗೆ ಸಾಗಿತು.
ಜಾತ್ರೆ ಯಶಸ್ಸಿಗೆ ಶ್ರಮಿಸಿದವರಿಗೆ ಧನ್ಯವಾದ: ಲಕ್ಷಾಂತರ ಭಕ್ತರು ಭಾಗವಹಿಸಿದ ಸವದತ್ತಿ ಗ್ರಾಮದೇವಿಯರ ಜಾತ್ರೆ ಶಾಂತಿಯುತವಾಗಿ ನೆರವೇರಿತು. ಯಶಸ್ಸಿಗೆ ಶ್ರಮಿಸಿದ ಗೌಡರ ಮನೆತನ, ರೈತ ಪ್ರಮುಖರು, ವಿವಿಧ ಮಠಾಧೀಶರು, ನಗರಸಭೆ ಸಿಬ್ಬಂದಿ, ಪೊಲೀಸ್ ಇಲಾಖೆ, ತಾಲೂಕು ಆಡಳಿತ ಹಾಗೂ ಸಾರ್ವಜನಿಕರಿಗೆ ಶಾಸಕ ವಿಶ್ವಾಸ ವೈದ್ಯ ಧನ್ಯವಾದ ತಿಳಿಸಿದರು.