eye 
ಬೆಳಗಾವಿ

ನೇತ್ರ ಚಿಕಿತ್ಸಾ ಕ್ಯಾಂಪ್ ಇಂದು

ಧರ್ಮರಾಜ ರಾಮನಗೌಡ ಪಾಟೀಲ
ಬೆಳಗಾವಿ: ಈಚೆಗೆ ಜರುಗಿದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಜೈಂಟ್ಸ್ ಗ್ರೂಪ್ ಸಖಿ ಬೆಳಗಾವಿ ವತಿಯಿಂದ ಮಾ.26ರಂದು ಬೆಳಿಗ್ಗೆ 11ಕ್ಕೆ ಟಿಳಕವಾಡಿಯ ನಂದಾದೀಪ ನೇತ್ರಾಲಯದಲ್ಲಿ ಕಣ್ಣಿನ ತಪಾಸಣಾ ಶಿಬಿರ ಆಯೋಜಿಸಲಾಗಿದೆ.
ಶಿಬಿರದಲ್ಲಿ ನೇತ್ರ ತಜ್ಞರಾದ ಡಾ.ಜೋತ್ಸ್ನಾ ಪಾಟೀಲ, ಡಾ.ಸೌರವ ಪಾಟೀಲ ಮತ್ತು ಡಾ.ಎ.ಆರ್.ಪಾರೈ ಅವರು, ಅತ್ಯಾಧುನಿಕ ಯಂತ್ರವನ್ನು ಬಳಸಿಕೊಂಡು ಕಣ್ಣಿನ ಪರೀಕ್ಷೆ ನಡೆಸಿ, ಕಣ್ಣಿನ ಕಾಯಿಲೆಗಳು ಮತ್ತು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಮಾಗದರ್ಶನ ನೀಡುವರು.
ಈ ಶಿಬಿರಕ್ಕೆ ನಂದಾದೀಪ ಆಸ್ಪತ್ರೆಯ ಡಾ.ಆನಂದ ತುಪ್ಪದ ಸಹಯೋಗ ನೀಡಿದ್ದು, ಎಲ್ಲ ಸಖಿಯರು ಬೆಳಗ್ಗೆ 10.30ಕ್ಕೆ ನಂದಾದೀಪ ನೇತ್ರಾಲಯ, 1 ನೇ ಮಹಡಿ, ಸಿಟಿಎಸ್ ಸಂಖ್ಯೆ 28, ಖಾನಾಪುರ ರಸ್ತೆ, ಯೆಸ್ ಬ್ಯಾಂಕ್ ಎದುರು, ಟಿಳಕವಾಡಿ ಇಲ್ಲಿ ಹಾಜರಿರುವಂತೆ ಜೈಂಟ್ಸ್ ಗ್ರೂಪ್ ಅಧ್ಯಕ್ಷೆ ಸುಲಕ್ಷಣ ಶಿನ್ನೋಲ್ಕರ್ ಮತ್ತು ಕಾರ್ಯದರ್ಶಿ ದೀಪಾ ಪಾಟೀಲ ಕೋರಿದ್ದಾರೆ.