ಯಡ್ರಾವ ಗ್ರಾಮದಲ್ಲಿರುವ ಕನ್ನಡ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಸಾಂಸ್ಕೃತಿಕ ಚಟುವಟಿಕೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಬಿ.ಎಸ್.ಮುಧೋಳ, ಸತ್ಯಪ್ಪ ಭಿಷ್ಟ್ಟೆ, ಕಲ್ಲಪ್ಪ ನಿಂಗನೂರು, ರಾಜು ಸಜ್ಜನ್ನವರ ಇತರರಿದ್ದರು.
ಮಾಂಜರಿ: ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ಶಿವಶಕ್ತಿ ಶುಗರ್ಸ್ ಮಾನವ ಸಂಪನ್ಮೂಲ ಅಧಿಕಾರಿ ಬಿ.ಎಸ್.ಮುಧೋಳ ಹೇಳಿದರು. ಯಡ್ರಾವ ಗ್ರಾಮದಲ್ಲಿರುವ ಕೆಎಲ್‌ಇ ಶಿಕ್ಷಣ ಸಂಸ್ಥೆಯ ಕನ್ನಡ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆ ವಿದ್ಯಾರ್ಥಿಗಳ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ ಸಮಾರಂಭಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದರು. ಸಲಹಾ ಸಮಿತಿ ಅಧ್ಯಕ್ಷ ಸತ್ಯಪ್ಪ ಭಿಷ್ಟೆ ಮಾತನಾಡಿ, ಸೃಜನಾತ್ಮಕ ಕಲಿಕೆಯಿಂದ ಮಕ್ಕಳ ವ್ಯಕ್ತಿತ್ವ ವೃದ್ಧಿಯಾಗುತ್ತದೆ ಎಂದು ತಿಳಿಸಿದರು. ದಯಾನಂದ ಕಬ್ಬೂರಿ, ಸದಾಶಿವ ನಿಪ್ಪಾಣಿ, ಕಲ್ಲಪ್ಪ ನಿಂಗನೂರು, ರಾಜು ಸಜ್ಜನ್ನವರ, ಶಿವರುದ್ರ ಕಾಂಬಳೆ, ಧನಶ್ರೀ ಚೌಗುಲೆ, ಸುಹಾಸಿನಿ ಹಿರೇಮಠ ಇತರರಿದ್ದರು.